16 ನೇ ಆವೃತ್ತಿಯ ಐಪಿಎಲ್ (IPL 2023) ಟೂರ್ನಿಯಲ್ಲಿ ಈಗಾಗಲೇ 29 ಪಂದ್ಯಗಳು ನಡೆದಿವೆ. ಸದ್ಯ ಬಿಸಿಸಿಐ ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದೆ.
ಈ ಬಾರಿಯ ಐಪಿಎಲ್ ಫೈನಲ್ ಮೇ 28ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ( Narendra Modi Stadium in Ahmedabad) ನಡೆಯಲಿದೆ ಎನ್ನಲಾಗಿತ್ತು. ಆದರೆ, ಅಧಕೃತವಾಗಿ ಘೋಷಣೆಯಾಗಿರಲಿಲ್ಲ. ಸದ್ಯ ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದೆ. ಐಪಿಎಲ್ ಫೈನಲ್ ಪಂದ್ಯವನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ರಸಕ್ತ ಐಪಿಎಲ್ ಗ್ರೂಪ್ ಹಂತದಲ್ಲಿ 10 ಫ್ರಾಂಚೈಸಿಗಳು ಒಟ್ಟು 70 ಪಂದ್ಯಗಳನ್ನು ಆಡುತ್ತಿವೆ. ಮೇ 21 ರಂದು ಗುಂಪು ಹಂತದ ಕೊನೆಯ ಪಂದ್ಯ ನಡೆಯಲಿದೆ. ಮೇ. 23 ರಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ. ನಂತರ ಮೇ 28 ಭಾರತದ ಮಿಲಿಯನೇರ್ ಲೀಗ್ ನ ಫೈನಲ್ ಕಾದಾಟ ನಡೆಯಲಿದೆ.
ಮೇ. 23 – ಕ್ವಾಲಿಫೈಯರ್ ಮೊದಲ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ. ಮೇ. 24ರಂದು ಎಲಿಮಿನೇಟರ್ ಪಂದ್ಯವು ಕೂಡ ಚೆನ್ನೈನಲ್ಲಿಯೇ ನಡೆಯಲಿದೆ. ಮೇ. ಮೇ 26 ಕ್ವಾಲಿಫೈಯರ್ 2ನೇ ಪಂದ್ಯ ಪಂದ್ಯವು ಅಹಮದಾಬಾದ್ ನಲ್ಲಿ ನಡೆಯಲಿದೆ. 28ರಂದು ಫೈನಲ್ ಪಂದ್ಯವು ಅಹಮದಾಬಾದ್ ನಲ್ಲಿ ನಡೆಯಲಿದೆ.