ಬೆಂಗಳೂರು: ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ (Electricity Bill) ಬಂದಿದ್ದು, ಇದನ್ನು ಕಂಡ ವ್ಯಕ್ತಿ ಶಾಕ್ ಆಗಿದ್ದಾರೆ.
ಬೆಂಗಳೂರಿನ (Bengaluru) ಜೆಬಿ ಕಾವಲ್ ನಲ್ಲಿ ಈ ಘಟನೆ ನಡೆದಿದೆ. ಜೆಬಿ ಕಾವಲ್‌ನ (JB Kaval) ಕೃಷ್ಣಾನಂದ ನಗರ ಪೊಲೀಸ್ ಕ್ವಾಟ್ರಸ್ ನಲ್ಲಿ ಮನೆಗೆ ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ ಬಂದಿದ್ದು, ಬಿಲ್ ಕಂಡು ನಿವಾಸಿ ಶಾಕ್ ಗೆ ಒಳಗಾಗಿದ್ದಾರೆ.
17 ಕೋಟಿ ರೂ. ಬಿಲ್ ಬಂದಿರುವ ವಿಷಯ ಸಖತ್ ವೈರಲ್ ಆಗುತ್ತಿದ್ದು, ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಮೇ 5 ರಂದು ಕರೆಂಟ್ ಬಿಲ್ ವಿತರಣೆ ಆಗಿದೆ. ಒಟ್ಟು 17,15,75596 ಕರೆಂಟ್ ಬಿಲ್ ಬಂದಿದೆ. ಬೆಸ್ಕಾಂ (BESCOM) ಮೀಟರ್ ತಾಂತ್ರಿಕ ಸಮಸ್ಯೆಯಿಂದಾಗಿ ಈ ರೀತಿ ಬಂದಿದೆ ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ.