ಮರ್ಯಾದೆ ಹತ್ಯೆಗೆ ಬಲಿಯಾದ 17 ವರ್ಷದ ಬಾಲಕಿ
ಲಕ್ನೋ: ಮನೆತನದ ಮರ್ಯಾದೆಗೋಸ್ಕರ ಬಾಲಕಿಯ ಪೊಷಕರೇ ಬಾಲಕಿಯನ್ನು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬಾಂದಾದಲ್ಲಿ ನಡೆದಿದೆ.
ಗುರ್ಹಾ ಕಾಲಾ ಗ್ರಾಮದ ನಿವಾಸಿ 17 ವರ್ಷದ ಮಗಳನ್ನು ಕತ್ತುಹಿಸುಕಿ ತಂದೆ ಮತ್ತು ಮಗ ಕೊಲೆ ಮಾಡಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ. ಬಾಲಕಿಯ ತಂದೆ ದೇಶರಾಜ್ ಹಾಗೂ ಬಾಲಕಿಯ ಸಹೋದರ ಧನಂಜಯ್ ಕೊಲೆ ಆರೋಪಿಗಳು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆ ವೇಳೆ 17 ವರ್ಷದ ಬಾಲಕಿ ಅದೇ ಜಾತಿಯ ಹುಡುಗನೊಂದಿಗೆ ಸಂಬಂಧ ಹೊಂದಿದ್ದಳು. ಇದಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಬುಧವಾರ ಆಕೆಯನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ. ಶವವನ್ನು ಮರೆಮಾಚಲು ದನದ ಕೊಟ್ಟಿಗೆಯ ಒಳಗೆ ಹೂತು ಹಾಕಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿತಿನ್‌ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಶುಕ್ರವಾರ ಶವವನ್ನು ಹೊರತೆಗೆಯಲಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯು ಕತ್ತು ಹಿಸುಕಿದ ಕಾರಣದಿಂದ ಮೃತಪಟ್ಟಿದ್ದಾರೆ ಎಂಬುದನ್ನು ಖಚಿತಪಡಿಸಿತು. ಹುಡುಗಿಯ ದೇಹದ ಮೇಲೆ ಗಾಯದ ಗುರುತುಗಳಾಗಿರುವುದು ಕಂಡುಬಂದಿತ್ತು. ಈ ಪ್ರಕರಣವು ಮರ್ಯಾದೆ ಗೇಡು ಹತ್ಯೆಗೆ ಸಂಬಂಧಿಸಿದ್ದು ಇಬ್ಬರನ್ನೂ ಶುಕ್ರವಾರ ತಡರಾತ್ರಿ ಬಂಧಿಸಲಾಗಿದೆ ಎಂದು ನಿತಿನ್ ಕುಮಾರ್ ಹೇಳಿದ್ದಾರೆ.