ನ್ಯೂಯಾರ್ಕ್ನ ಅಪಾರ್ಟ್ಮೆಂಟ್ ನಲ್ಲಿ ಬೆಂಕಿ – ಮಕ್ಕಳು ಸೇರಿ 19 ಜನ ಸಜೀವ ದಹನ
ಅಮೆರಿಕಾದ ನ್ಯೂಯಾರ್ಕ್ನ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಂಬತ್ತು ಮಕ್ಕಳು ಸೇರಿದಂತೆ 19 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಭಾನುವಾರ ಬೆಳಿಗ್ಗೆ ನ್ಯೂಯಾರ್ಕ್ನ ಬ್ರಾಂಕ್ಸ್ ಅಪಾರ್ಟ್ಮೆಂಟ್ನಲ್ಲಿ ನಡೆದ ಈ ಭೀಕರ ಅಪಘಾತದಲ್ಲಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ಗಾಯಗೊಂಡವರಲ್ಲಿ ಹತ್ತಾರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಅಪಾರ್ಟ್ಮೆಂಟ್ನ ಪ್ರತಿ ವಾಸಿಸುವ ಪ್ರತಿ ಮನೆಗೂ ಬೆಂಕಿಯ ಪರಿಣಾಮ ಬೀರಿದ್ದು ಹೊಗೆಯಿಂದ ಉಸಿರಾಡಲು ತೊಂದರೆ ಅನುಭಸುತ್ತಿದ್ದಾರೆ. ಅಗ್ನಿಶಾಮಕ ಇಲಾಖೆ ಆಯುಕ್ತ ಡೇನಿಯಲ್ ನೀಗ್ರೋ ಪ್ರಕಾರ, ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.
UPDATE: The fire in a New York City apartment building that killed at least 19 people was caused by a faulty space heater.
The apartment's door was left open, allowing smoke to quickly spread throughout the building, the city's fire commissioner said: https://t.co/LrnQuKCjg8 pic.twitter.com/tnMOW8lGvi
— DW News (@dwnews) January 9, 2022
ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದರ ಕುರಿತು ಇನ್ನೂ ಅಧಿಕೃತ ದೃಢಪಟ್ಟಿಲ್ಲ. ಆದರೆ ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಪ್ರಕಾರ, ಬೆಂಕಿ ಬಹುಶಃ ಕೋಣೆಯ ಹೀಟರ್ನಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದು ನಗರದಲ್ಲಿ ನಡೆದ ಅತ್ಯಂತ ಭೀಕರ ಅಪಘಾತ ಎಂದು ಮೇಯರ್ ಬಣ್ಣಿಸಿದ್ದಾರೆ.
ಅಗ್ನಿಶಾಮಕ ಕಮಿಷನರ್ ಡೇನಿಯಲ್ ನೀಗ್ರೋ ಮಾಧ್ಯಮದೊಂದಿಗಿನ ಸಂವಾದದ ಸಂದರ್ಭದಲ್ಲಿ, ಬೆಂಕಿ ಎಷ್ಟು ಭೀಕರವಾಗಿದೆಯೆಂದರೆ ಅದು 19 ಅಂತಸ್ತಿನವರೆಗೂ ಕಟ್ಟಡವನ್ನು ಆವರಿಸಿದೆ ಎಂದು ಹೇಳಿದ್ದಾರೆ. 200 ಅಗ್ನಿಶಾಮಕ ಸಿಬ್ಬಂದಿಗಳ ನೆರವಿನಿಂದ ಬೆಂಕಿಯನ್ನು ಹತೋಟಿಗೆ ತರಲಾಗಿದೆ.
New videos shows smoke pouring out of an apartment building in New York City from a massive fire that killed at least 19 people. including nine children, according to officials. https://t.co/JPO13Cafbv pic.twitter.com/mlsK9BCE98
— ABC News (@ABC) January 9, 2022