Male Mahadeshwra: ಮುದ್ದು ಮಾದಪ್ಪನ ಹುಂಡಿಯಲ್ಲಿ 2.13 ಕೋಟಿ ರೂಪಾಯಿ ಹಣ ಸಂಗ್ರಹ
1 min read
ಮುದ್ದು ಮಾದಪ್ಪನ ಹುಂಡಿಯಲ್ಲಿ 2.13 ಕೋಟಿ ರೂಪಾಯಿ ಹಣ ಸಂಗ್ರಹ
ಚಾಮರಾಜನಗರ: ನಾಡಿನ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಕೇವಲ 28 ದಿನಗಳಲ್ಲಿ 2.13 ಕೋಟಿ ರೂಪಾಯಿ ಸಂಗ್ರಹವಾಗಿದೆ.
ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಪ್ರಾರಂಭವಾದ ಹುಂಡಿ ಎಣಿಕೆ ತಡರಾತ್ರಿವರೆಗು ನಡೆದಿದೆ. ಹುಂಡಿಯಲ್ಲಿ ಒಟ್ಟು ಬರೋಬ್ಬರಿ 2,13,53,095ರೂ. ಹರಿಕೆ ರೂಪದಲ್ಲಿ ಸಂಗ್ರಹವಾಗಿದೆ.
ಇದರಲ್ಲಿ ನಾಣ್ಯ 13 ಲಕ್ಷ ರೂ ಇದ್ದು 1.9 ಕೆ.ಜಿ ಬೆಳ್ಳಿ ಹಾಗೂ 45 ಗ್ರಾಂ ಚಿನ್ನವನ್ನು ಭಕ್ತರು ಕಾಣಿಕೆ ರೂಪದಲ್ಲಿ ಭಕ್ತರು ಮುದ್ದು ಮಾದಪ್ಪನಿಗೆ ಅರ್ಪಿಸಿದ್ದಾರೆ.