2 ತಲೆ ಇರುವ ಕರುವಿಗೆ ಜನ್ಮ ನೀಡಿದ ಎಮ್ಮೆ
ಲಕ್ನೋ : ಉತ್ತರ ಪ್ರದೇಶದ ವಾರಣಾಸಿಯಲ್ಲಿ ಎಮ್ಮೆಯೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿದೆ. ಎಮ್ಮೆ ಮತ್ತು ಕರು ಆರೋಗ್ಯವಾಗಿದ್ದು, ಕರುವನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.
ವಾರಣಾಸಿಯ ಕ್ಯಾಂಟ್ ಪ್ರದೇಶದಲ್ಲಿರುವ ಸಿಕ್ರೋಲ್ ನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಎಮ್ಮೆ ಇಂದು ಬೆಳಿಗ್ಗೆ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದು, ಕರುವನ್ನು ಹೊರಗೆ ತೆಗೆಯಲು ನೆರೆಹೊರೆಯವರು ಮುಂದಾಗಿದ್ದಾರೆ.
ಈ ವೇಳೆ ಎರಡು ತಲೆ ಕಾಣಿಸಿಕೊಂಡಿದೆ. ಇದನ್ನ ಗಮನಿಸಿದ ಸ್ಥಳೀಯರು ಎರಡು ಕರುಗಳು ಇರಬಹುದು ಎಂದು ಅಚ್ಚರಿಯಿಂದ ನೋಡಿದ್ದಾರೆ.
ಆಗ ಎರಡು ತಲೆ ಇರುವ ಕರು ಹೊರ ಬಂದಿದೆ. ಇದನ್ನ ಕಂಡ ಜನರು ಆಶ್ಚರ್ಯದ ಜೊತೆಗೆ ಸ್ವಲ್ಪ ಕಾಲ ಭಯಭೀತಗೊಂಡಿದ್ದಾರೆ.
ಇನ್ನು ವಿಷಯ ಗಾಳಿಯ ವೇಗದಲ್ಲಿ ಸುತ್ತಮುತ್ತಲಿ ಪ್ರದೇಶಕ್ಕೆ ಹರಡಿದ್ದು, ಜನರು ಕರುವನ್ನ ನೋಡಲು ಮುಗಿಬಿದ್ದಿದ್ದಾರೆ.