ನವದೆಹಲಿ: ಮದ್ಯ ಕಂಪನಿಯ ಮೇಲೆ ಐಟಿ ಅಧಿಕಾರಗಳು ದಾಳಿ ನಡೆಸಿದ್ದು, 200 ಕೋಟಿ ರೂ. ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಹಣ ಲೆಕ್ಕ ಹಾಕಿ, ಯಂತ್ರಗಳೇ ಕೈ ಕೊಟ್ಟಿವೆ.
ಆದಾಯ ತೆರಿಗೆ ಇಲಾಖೆ (Income Tax Department) ಅಧಿಕಾರಿಗಳು ಒಡಿಶಾ ಹಾಗೂ ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ (BDPL) ಕಚೇರಿ ಹಾಗೂ ಸಂಪರ್ಕದಲ್ಲಿರುವ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಿ ಹಣ ವಶಕ್ಕೆ ಪಡೆದಿದ್ದಾರೆ.
ಸದ್ಯದ ಮಾಹಿತಿಯಂತೆ 200 ಕೋಟಿ ರೂ. ಹಣ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. ಒಡಿಶಾದಲ್ಲಿ ಪ್ರಧಾನ ಕಚೇರಿ ಹೊಂದಿ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದೆ. ತೆರಿಗೆ ವಂಚನೆಯ ನಿಖರ ಮೊತ್ತ ಇದುವರೆಗೆ ತಿಳಿದು ಬಂದಿಲ್ಲ.
2019 ರಿಂದ 2021 ರ ಹಣಕಾಸು ವರ್ಷದಲ್ಲಿ ಕಂಪನಿ ಕಡಿಮೆ ಆದಾಯ ತೋರಿಸಿದ್ದಕ್ಕೆ ಐಟಿ ರೈಡ್ ನಡೆದಿದೆ ಎನ್ನಲಾಗಿದೆ.