ಕೊಹ್ಲಿ, ಸೂರ್ಯ, ಪಾಂಡ್ಯ ದರ್ಬಾರ್ – ICC ಪುರುಷರ T20 ತಂಡದಲ್ಲಿ ಸ್ಥಾನ…
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ICC ಸೋಮವಾರ ಐಸಿಸಿ 2022 ಪ್ರಶಸ್ತಿಗಳ ವಿಜೇತರ ಹೆಸರನ್ನ ಬಹಿರಂಗಪಡಿಸಿದೆ. ICC 2022 ನೇ ವರ್ಷದ ಮಹಿಳಾ ಮತ್ತು ಪುರುಷರ T20 ತಂಡವನ್ನ ಪ್ರಕಟ ಮಾಡಿದ್ದು ಭಾರತ ಸ್ಟಾರ್ ಆಟಗಾರಾದ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಸೇರಿಕೊಂಡಿದ್ದಾರೆ. ಮಹಿಳೆರ ತಂಡದಲ್ಲಿ ಸ್ಮೃತಿ ಮಂಧಾನ ಸ್ಥಾನ ಪಡೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ 2022 ರ ಏಷ್ಯಾ ಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಸಿಡಿಸಿದಾಗಿನಿಂದ ಕೊಹ್ಲಿ ತನ್ನ ಫಾರ್ಮ್ ಕಂಡುಕೊಂಡಿದ್ದಾರೆ. ಪಾಕಿಸ್ತಾನದ ವಿರುದ್ಧ ವಿಶ್ವಕಪ್ ನಲ್ಲಿ ಮಾಂತ್ರಿಕ ಆಟವಾಡಿದ್ದರು.
ಸೂರ್ಯಕುಮಾರ್ ಯಾದವ್ 2022 ರಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದರು. 31 ಇನ್ನಿಂಗ್ಸ್ ಗಳಿಂದ 187.43 ರ ಸ್ಟ್ರೈಕ್ ರೇಟ್ನಲ್ಲಿ 1164 ರನ್ಗಳಿಸಿ ವಿಶ್ವದ ನಂಬರ್ 1 ಬ್ಯಾಟರ್ ಎನಿಸಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಸೀಮಿತ ಓವರ್ಗಳಲ್ಲಿ ನಾಯಕನಾಗುವತ್ತ ಮುನ್ನಡೆಯುತ್ತಿದ್ದಾರೆ. 2022ರಲ್ಲಿ 27 ಪಂದ್ಯಗಳಿಂದ 607 ರನ್ ಮತ್ತು 20 ವಿಕೆಟ್ ಗಳನ್ನ ಪಡೆದಿದ್ದಾರೆ.
2022 ರ ಪುರುಷರ ಟ್ವಿ 20 ತಂಡ ಈ ರೀತಿ ಇದೆ…
ಜೋಸ್ ಬಟ್ಲರ್, ಮೊಹಮ್ಮದ್ ರಿಜ್ವಾನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಗ್ಲೆನ್ ಫಿಲಿಪ್ಸ್, ಸಿಕಂದರ್ ರಜಾ, ಹಾರ್ದಿಕ್ ಪಾಂಡ್ಯ, ಸ್ಯಾಮ್ ಕರ್ರಾನ್, ವನಿಂದು ಹಸರಂಗ, ಹ್ಯಾರಿಸ್ ರೌಫ್, ಜೋಶ್ ಲಿಟಲ್.
2022 ICC Men’s T20 : Kohli, Suriya, Pandya Durbar – Place in ICC Men’s T20 squad…