ಬೆಂಗಳೂರು: ದಾಖಲೆ ಇಲ್ಲದೆ ಬೈಕ್ ನಲ್ಲಿ ಸಾಗಿಸುತ್ತಿದ್ದ 25 ಲಕ್ಷ ರೂ. ಹಣವನ್ನು ಚುನಾವಣಾ ಆಯೋಗ ವಶಕ್ಕೆ ಪಡೆದಿರುವ ಘಟನೆ ಹೊಸೂರು ಸಮೀಪದ ಕರ್ನೂರು ಚೆಕ್ ಪೋಸ್ಟ್ ಹತ್ತಿರ ನಡೆದಿದೆ.
ಹೊಸೂರಿನಿಂದ ಕರ್ನೂರು ಮಾರ್ಗವಾಗಿ ರಾಜೇಂದ್ರನ್ ಎಂಬ ವ್ಯಕ್ತಿ ದಾಖಲೆ ಇಲ್ಲದ ಈ ಹಣ ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಬೈಕ್ ತಡೆದು ಪರಿಶೀಲನೆ ನಡಸಿದ್ದಾರೆ. ಆಗ ಹಣ ಪತ್ತೆಯಾಗಿದೆ. ಸದ್ಯ ಅಧಿಕಾರಿಗಳು ಹಣವನ್ನು ವಸಕ್ಕೆ ಪಡೆದಿದ್ದಾರೆ.
ಅಧಿಕಾರಿಗಳು ಕಾರು ಸೇರಿದಂತೆ ಇನ್ನಿತರ ವಾಹನ ಚೆಕ್ ಮಾಡುತ್ತಾರೆ. ಬೈಕ್ ಚೆಕ್ ಮಾಡುವುದಿಲ್ಲ ಎಂಬ ಕಾರಣಕ್ಕೆ ಹಲವರು ಈ ರೀತಿಯ ಮಾರ್ಗ ಅನುಸರಿಸಿರಬೇಕು ಎಂಬ ಸಂಶಯ ವ್ಯಕ್ತವಾಗುತ್ತಿದೆ. ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.