26/11 mumbai attack : ಮುಂಬೈ ಮೇಲಿನ ದಾಳಿಗೆ 14 ವರ್ಷ – ಸಂಚುಕೋರರಿಗೆ ಇನ್ನೂ ಶಿಕ್ಷೆಯಾಗಿಲ್ಲ..
ದೇಶದ ವಾಣಿಜ್ಯ ನಗರಿ ಮುಂಬೈ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿ ಇಂದಿಗೆ 14 ವರ್ಷ. ಪಾಕಿಸ್ತಾನದ ಉಗ್ರರ ಬಾಂಬ್ ದಾಳಿಯಿಂದ ನೂರಾರು ಮಂದಿ ಸಾವನ್ನಪ್ಪಿದ್ದಾರೆ.
2008 ರ ನವೆಂಬರ್ 26ರಂದು ಮುಂಬೈ ನ ಕೊಲಾಬಾ ಬೀಚ ಮೂಲಕ ಜಲ ಮಾರ್ಗದಲ್ಲಿ ನುಸುಳಿದ ಹತ್ತು ಮಂದಿ ಭಯೋತ್ಪಾದಕರು ಅತ್ಯಂತ ಜನನಿಬೀಡ ಪ್ರದೇಶವಾದ ಛತ್ರಪತಿ ಶಿವಾಜಿ ಟರ್ಮಿನಲ್ ಗೆ ನುಗ್ಗಿ ಗುಂಡಿನ ಸುರಿಮಳೆಗೈದಿದ್ದರು.
ಒಬೆರಾಯ್ ಟ್ರೈಡೆಂಟ್ ತಾಜ್ ಹೋಟೆಲ್ ಲಿಯೋಫೋಲ್ಡ್ ಕೆಫೆ ನಾರಿಮನ್ ಲೈಟ್ ಹೌಸ್ ಸೇರಿದಂತೆ 12 ಕಡೆ ದಳಿ ನಡೆಸಿದ್ದರು. ಸುಮಾರು 60 ಗಂಟೆಗಳ ಕಾಲ ನಡೆದ ಹತ್ಯಾಕಾಂಡದಲ್ಲಿ 166 ಮಂದಿ ಪ್ರಾಣ ಕಳೆದುಕೊಂಡಿದ್ದರು. ಅದರಲ್ಲಿ ಅವರಲ್ಲಿ 18 ಮಂದಿ ಭದ್ರತಾ ಸಿಬ್ಬಂದಿ ಸೇರಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ನವೆಂಬರ್ 26, ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. 26/11 ಮುಂಬೈ ಭಯೋತ್ಪಾದನಾ ದಾಳಿಯ ವಾರ್ಷಿಕೋತ್ಸವದಂದು, ಕರ್ತವ್ಯದ ಸಾಲಿನಲ್ಲಿ ವೀರಾವೇಶದಿಂದ ಹೋರಾಡಿದ ಮತ್ತು ಅತ್ಯುನ್ನತ ತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗೆ ರಾಷ್ಟ್ರವು ಗೌರವ ಸಲ್ಲಿಸುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.
ಭಯೋತ್ಪಾದನೆ ಮಾನವೀಯತೆಗೆ ಧಕ್ಕೆ ತಂದಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಹೇಳಿದ್ದಾರೆ. ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯನ್ನು ನೆನಪಿಸಿಕೊಂಡ ಡಾ. ಜೈಶಂಕರ್, ಭಾರತತದೊಂದಿಗೆ ಇಡೀ ಜಗತ್ತು ನರಮೇಧದ ಕಹಿ ನೆನಪುಗಳನ್ನ ನೆನಪಿಸಿಕೊಳ್ಳುತ್ತದೆ. ಈ ದಾಳಿಯ ಯೋಜನೆ ಮತ್ತು ಮೇಲ್ವಿಚಾರಣೆ ನಡೆಸಿದವರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಅವರು ಹೇಳಿದರು.
26/11 mumbai attack : 14 years of attack on Mumbai – conspirators still not punished..