67 ರ ಮಹಿಳೆಯ ಜೊತೆ 28 ವರ್ಷದ ಯುವನ ಪ್ರೀತಿ – ಸಹ ಜೀವನ ನಡೆಸಲು ಕೋರ್ಟ್ ಮೊರೆ.
ಇದೊಂದು ಅಸಾಧಾರಣ ಪ್ರೇಮಕಥೆ. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಅರಳಿದ ಪ್ರೀತಿ. ಈ ಪ್ರೀತಿಯನ್ನ ಉಳಿಸಿಕೊಳ್ಳಲು ನಾನಾ ಹರಸಾಹಸ ಪಡುತ್ತಿದೆ. ಎರಡು ತಲೆಮಾರುಗಳ ನಡುವೆ ಹುಟ್ಟಿದ ಪ್ರೀತಿಯ ಕಥೆ ಕೇಳಿದ್ರೆ ಪ್ರೇಮಕ್ಕೆ ಕಣ್ಣಿಲ್ಲ, ಪ್ರೇಮ ಕುರುಡು ಎನ್ನವುದು ನೆನಪಾಗುತ್ತದೆ.
ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್ ನಲ್ಲಿ 28 ವರ್ಷದ ಯುವಕ 67 ವರ್ಷದ ಮಹಿಳೆಯನ್ನ ಪ್ರೀತಿಸುತ್ತಿದ್ದಾನೆ. ಆಕೆಯ ಜೊತೆ ಜೀವನ ನಡೆಸಲು ಗ್ವಾಲಿಯರ್ ಕೋರ್ಟ್ ಮೆಟ್ಟಿಲೇರಿದ್ದಾನೆ. ಮಧ್ಯಪ್ರದೇಶದ ಗ್ವಾಲಿಯರ್ನ ಮೊರೆನಾದಲ್ಲಿ ನಡೆದಿರುವ ಘಟನೆ ಇದು.
ವಕೀಲ ಪ್ರದೀಪ್ ಅವಸ್ತಿ ಅವರ ಪ್ರಕಾರ ರಾಮಕಾಳಿ ಮತ್ತು ಭೋಲು ಒಂದೇ ಗ್ರಾಮದ ನಿವಾಸಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದಾರೆ. ಇವರಿಗೆ ಇತರರಿಂದ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ನೋಟರಿ ಪಡೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ಯಾವುದೇ ರೀತಿಯ ಕಾನೂನು ಮಾನ್ಯತೆ ಇಲ್ಲ ಎಂದರು.
ಆದರೂ 28ರ ಯುವಕ, ವೃದ್ಧೆಯ ಜೊತೆ ಜೀವನ ನಡೆಸಲು ಮುಂದಾಗಿರುವುದು ಮಾತ್ರ ವಿಚಿತ್ರ.