2ನೇ ಟೆಸ್ಟ್ | ಮಯಾಂಕ್ ಔಟ್.. ಸಹಾ ಓಪನಿಂಗ್.. Mayank Saaksha tv
ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಅಂಗವಾಗಿ ನಡೆದ ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಿದೆ.
ಈ ಹಿನ್ನೆಲೆಯಲ್ಲಿ ಎರಡನೇ ಪಂದ್ಯವನ್ನು ಹೇಗಾದರೂ ಗೆಲ್ಲಲೇಬೇಕೆಂಬ ಹಠದಲ್ಲಿ ಟೀಂ ಇಂಡಿಯಾ ಇದೆ.
ಮುಂಬೈ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಬೇಕು ಅನ್ನೋ ಪ್ಲಾನ್ ಟೀಂ ಇಂಡಿಯಾಗಿದ್ದು, ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸುತ್ತಿದೆ
ಈ ಮಧ್ಯೆ ಮುಂಬೈ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ ವಾಲ್ ಅವರನ್ನು ಕೈಬಿಟ್ಟು, ಸಹಾ ಅವರನ್ನು ಆರಂಭಿಕರನ್ನಾಗಿ ಕಳುಹಿಸಬೇಕೆಂದು ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಟೆಸ್ಟ್ ಗೆ ವಿರಾಟ್ ಕೊಹ್ಲಿ ತಂಡ ಸೇರಿಕೊಳ್ಳಲಿದ್ದಾರೆ. ಇತ್ತ ಸತತ ವೈಫಲ್ಯ ಅನುಭವಿಸುತ್ತಿರುವ ಚೇತೇಶ್ವರ್ ಪುಜಾರಾ, ರಹಾನೆ ಅವರನ್ನ ತಂಡದಿಂದ ಕೈಬಿಡಬೇಕು ಅನ್ನೋ ಚರ್ಚೆಗಳು ನಡೆಯುತ್ತಿದೆ.
ಈ ಬಗ್ಗೆ ವಾಸಿಂ ಪ್ರತಿಕ್ರಿಯೆ ನೀಡಿದ್ದು, ಮೊದಲ ಟೆಸ್ಟ್ ನಲ್ಲಿ ವಿಫಲರಾದ ಅಜಿಂಕ್ಯ ರಹಾನೆಗೆ ಮತ್ತೊಂದು ಅವಕಾಶ ನೀಡುವುದು ಒಳ್ಳೆಯದು. ದಕ್ಷಿಣ ಆಫ್ರಿಕಾ ಪ್ರವಾಸವನ್ನು ದೃಷ್ಠಿಯಲ್ಲಿಟ್ಟುಕೊಂಡು ರಹಾನೆ, ಪೂಜಾರಾ ಅವರನ್ನು ತಂಡದಲ್ಲಿ ಆಡಿಸುವುದು ಸೂಕ್ತ ಎಂದಿದ್ದಾರೆ.
ಇದಲ್ಲದೇ ಕಾನ್ಪುರ ಟೆಸ್ಟ್‍ನಲ್ಲಿ ವಿಫಲರಾದ ಮಯಾಂಕ್ ಅಗರ್ವಾಲ್ ಅವರನ್ನು ತಂಡದಿಂದ ಡ್ರಾಪ್ ಮಾಡುವಂತೆ ವಾಸಿಂ ಸಲಹೆ ನೀಡಿದ್ದಾರೆ.
ಅವರ ಬದಲಿಗೆ ವೃದ್ಧಿಮಾನ್ ಸಹಾ ಅವರನ್ನು ಓಪನಿಂಗ್ ಕಳುಹಿಸಬೇಕೆಂದಿದ್ದಾರೆ.
ಅದೇ ರೀತಿ ಮುಂಬೈ ಟೆಸ್ಟ್ ಗೆ ಇಶಾಂತ್ ಶರ್ಮಾ ಬದಲಿಗೆ ಹೈದರಾಬಾದ್ ಬೌಲರ್ ಮೊಹಮ್ಮದ್ ಸಿರಾಜ್ ಚಾನ್ಸ್ ನೀಡಬೇಕೆಂದು ತಿಳಿಸಿದ್ದಾರೆ.









