ಮಾನವೀಯತೆ ಇಲ್ಲದವರು, ಪುಟ್ಟ ಕಂದಮ್ಮಗಳನ್ನ ವಸ್ತುಗಳ ರೀತಿ ಮಾರಾಟ..!
3 ರಿಂದ 4 ತಿಂಗಳ ಒಳಗಿನ ಪುಟ್ಟ ಕಂದಮ್ಮಗಳನ್ನ ಮಾರಾಟ ಮಾಡ್ತಿದ್ದ ಆರೋಪಿಯನ್ನ ಮಂಗಳೂರಿನಲ್ಲಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅಂದ್ಹಾಗೆ ಹಾಸದ 5 ತಿಂಗಳ ಮಗು ಮಾರಾಟದ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಈತ ಸಿಕ್ಕಿಬಿದ್ದಾನೆ.
ಅಲ್ಲದೇ ಈತನ ಕುಕೃತ್ಯದಲ್ಲಿ ಭಾಗೀದಾರರಾಗಿದ್ದ ಇಬ್ಬರು ಮಹಿಳೆಯರನ್ನು ಸಹ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 30 ವರ್ಷದ ರಯಾನ್ ಬಂಧಿತ ಆರೋಪಿಯಾಗಿದ್ದು, ಪೊಲೀಸರು ಈತನನ್ನ ಮಂಗಲೂರಿನ ಕದ್ರಿಯ ಹೋಟೆಲ್ ಒಂದರಲ್ಲಿ ಸೆರೆ ಹಿಡಿದಿದ್ದಾರೆ. ಈತನ ಜೊತೆಗೆ ಕವಿತಾ ಹಾಗೂ ಮರಿಯಮ್ಮ ಎಂಬಾಕೆಯನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾರತದಲ್ಲಿ ಪ್ರತಿ ವರ್ಷ ವ್ಯರ್ಥವಾಗುತ್ತಿರುವ ಆಹಾರ ಎಷ್ಟು ಗೊತ್ತಾ..! ವಿಶ್ವಸಂಸ್ಥೆಯಿಂದ ಆಘಾತಕಾರಿ ಮಾಹಿತಿ
ಹಾಸನದ ಸುಮಾರು 5 ತಿಂಗಳ ಮಗುವನ್ನ ರಯಾನ್ ಕವಿತಾಳಿಗೆ 5 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಬಳಿಕ ಕವಿತಾ ಮಗುವನ್ನ ಮರಿಯಮ್ಮ ಎಂಬಾಕೆಗೆ ಮಾರಾಟ ಮಾಡಿದ್ದಾಳೆ. ಇನ್ನೂ ಈ ಕಿಡಿಗೇಡಿಗಳ ಕೈಯಿಂದ ಸದ್ಯ ಒಂದು ಮಗುವನ್ನ ಪೊಲೀಸರು ಬಚಾವ್ ಮಾಡಿದ್ದಾರೆ. ಇನ್ನೂ ಇವರ ಹಿಂದೆ ಮಕ್ಕಳ ಮಾರಾಟದ ದೊಡ್ಡ ಜಾಲವೇ ಇರಬಹುದು ಎಂಬ ಶಂಕೆಯಿಂದ ತನಿಖೆ ಆರಂಭಿಸಿದ್ದಾರೆ ಪೊಲೀಸರು.