ನೈಜೀರಿಯಾದಲ್ಲಿ ವಸತಿಶಾಲೆಯಿಂದ 300ಕ್ಕೂ ಹೆಚ್ಚು ಬಾಲಕಿಯರ ಕಿಡ್ನಾಪ್ ..!
ನೈಜೀರಿಯಾ: ಪಶ್ಚಿಮ ಆಫ್ರಿಕಾದ ಉತ್ತರ ನೈಜೀರಿಯಾದಲ್ಲಿ ವಸತಿಶಾಲೆಗೆ ನುಗ್ಗಿದ್ದ ಬಂಧೂಕುಧಾರಿಗಳು 300ಕ್ಕೂ ಹೆಚ್ಚು ಬಾಲಕಿಯರನ್ನು ಅಪಹರಿಸಿದ್ದಾರೆ. ಸದ್ಯ ಪ್ರಕರಣ ಇಡೀ ದೇಶದ ಜನರನ್ನ ಬೆಚ್ಚಿ ಬೀಳಿಸಿದೆ. ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರ ಸಾಮೂಹಿಕ ಅಪಹರಣ ಮಾಡಲಾಗಿದ್ದು, ಪೊಲೀಸ್ ಮತ್ತು ಮಿಲಿಟರಿ ಪಡೆ ವಿದ್ಯಾರ್ಥಿನಿಯರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ನೈಜೀರಿಯಾದ ಝಾಂಫರಾ ರಾಜ್ಯದಲ್ಲಿ ಇಂತಹದೊಂದು ಘಟನೆ ನಡೆದಿದೆ. ಶಾಲೆಯ ಹಾಸ್ಟೆಲ್ಗೆ ನುಗ್ಗಿದ ಶಸ್ತ್ರಸಜ್ಜಿತ ಕಿಡ್ನಾಪರ್ಗಳು ಸುಮಾರು 300ಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನ ಕಿಡ್ನಾಪ್ ಮಾಡಿದ್ದಾರೆ.
ಬಡತನದಿಂದ ಮುಕ್ತವಾಗಿದ್ಯಂತೆ ಚೀನಾ : ಕ್ಸಿ ಜಿನ್ಪಿಂಗ್ ಘೋಷಣೆ
ಇನ್ನೂ ಇಂತಹ ಕೃತ್ಯ ನಡೆದಿರೋದು ಇದೇ ಮೊದಲ ಬಾರಿಗೆ ಅಲ್ಲ. ಆಗಾಗ ಇಲ್ಲಿ ದೊಂಬಿಗಳು, ಜನರ ಮೇಲೆ ಹಿಂಸಾಚಾರ ನಕ್ಸಲ್ ಗಳ ಹಾವಳಿಯಿಂದ ಜನರು ಪರದಾಡಿ ಹೋಗಿದ್ದಾರೆ. ಅಲ್ಲದೇ ಇತ್ತೀಚೆಗೆ ನೈಜೀರಿಯಾ ಪಕ್ಕದ ನೈಜರ್ ನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಆಗ ಕಿಡ್ನಾಪರ್ಗಳು ಮಕ್ಕಳು ಸೇರಿದಂತೆ 42 ಮಂದಿಯನ್ನು ಕಿಡ್ನಾಪ್ ಮಾಡಿದ್ದರು. ಅಷ್ಟೇ ಅಲ್ಲದೇ ಓರ್ವ ವಿದ್ಯಾರ್ಥಿನಿಯನ್ನ ಹತ್ಯೆಗೈದಿದ್ದರು. ಮೂಲಗಳ ಪ್ರಕಾರ ಅವರೆಲ್ಲರನ್ನೂ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಅವರನ್ನೂ ಈವರೆಗೂ ರಿಲೀಸ್ ಮಾಡಿಲ್ಲ. ಇದರ ಬೆನ್ನಲ್ಲೇ ನೈಜೀರಿಯಾದ ಉತ್ತರ ಭಾಗದಲ್ಲಿ ಇಂತಹದ್ದೇ ಘಟನೆ ಮರುಕಳುಹಿಸಿದೆ. ಇತ್ತ ನೈಜೀರಿಯಾ ಸರ್ಕಾರದ ನಿರ್ಲಕ್ಷ್ಯ ಕಾನೂನು ವ್ಯವಸ್ಥೆಯ ವೈಫಲ್ಯತೆ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ಕಿಡ್ನಾಪ್ ಆಗಿರುವ ಮಕ್ಕಳ ಪೋಷಕರು ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನ ನಡೆಸುತ್ತಾ ಆಕ್ರೋಶ ಹೊರಹಾಕುತ್ತಿದ್ದಾರೆ.
ಕದನ ವಿರಾಮ ನಿಯಮಗಳ ಪಾಲನೆಗೆ ಒಪ್ಪಂದದ ಬಳಿಕ ಕಾಶ್ಮೀರದ ಕುರಿತು ಟ್ವೀಟ್ ಮಾಡಿದ ಇಮ್ರಾನ್..!
ಅಂತರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಮತ್ತೆ ಮಾರ್ಚ್ 31ರ ವರೆಗೆ ವಿಸ್ತರಣೆ..!
ಅಮೆರಿಕಾ ವಿರುದ್ಧ ಬೇಹುಗಾರಿಕೆಯ ಅಪಪ್ರಚಾರ : ಚೀನಾಗೆ ತಕ್ಕ ಪಾಠ ಕಲಿಸಿದ ವಿಶ್ವದ ದೊಡ್ಡಣ್ಣ..!