Hassan: ಜಿಲ್ಲೆಯ ಸಕಲೇಶಪುರ (Sakaleshpura) ತಾಲೂಕಿನ ಕುಡುಗರಹಳ್ಳಿ ಕ್ಯಾಂಪನ್ ನಲ್ಲಿದ್ದ ಸೈನಿಕರು ಮಧ್ಯಾಹ್ನ ಊಟ ಮಾಡಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಈ ಕ್ಯಾಂಪ್ ನಲ್ಲಿ ಚಾಲನಾ ತರಬೇತಿಗೆಂದು ಬಂದಿದ್ದ 35 ಜನ ಸೈನಿಕರು (Soldiers) ಇದ್ದರು. ಅವರೆಲ್ಲ ಮಧ್ಯಾಹ್ನ ಕ್ಯಾಂಪ್ ನಲ್ಲಿ ತಯಾರಾಗಿದ್ದ ಆಹಾರ ಸೇವಿಸಿದ್ದರು. ಆದರೆ, ಊಟ ಮಾಡಿದ ನಂತರ ಅಸ್ವಸ್ಥರಾಗಿದ್ದಾರೆ. ಕೂಡಲೇ ಮಿಲಿಟರಿ ವಾಹನಗಳಲ್ಲಿ ಕರೆತಂದು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಅಸ್ವಸ್ಥಗೊಂಡಿರುವ ಸೈನಿಕರ ಆರೋಗ್ಯ ವಿಚಾರಿಸಿದರು. ಫುಡ್ ಪಾಯ್ಸನ್ ನಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸದ್ಯ ಸೈನಿಕರು ಚೇತರಿಸಿಕೊಳ್ಳುತ್ತಿದ್ದಾರೆ.