J&K: ನಾಲ್ವರು ಭಯೋತ್ಪಾದಕ ಸಹಚರರ ಬಂಧನ
1 min read
ನಾಲ್ವರು ಭಯೋತ್ಪಾದಕ ಸಹಚರರ ಬಂಧನ
ಜಮ್ಮು-ಕಾಶ್ಮೀರ: ಕಣಿವೆ ರಾಜ್ಯದಲ್ಲಿ ಪೊಲೀಸರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಲಷ್ಕರ್ ಇ ತೊಯಬಾ ಸಂಘಟನೆಗೆ ನೆರವು ನೀಡುತ್ತಿದ್ದ ನಾಲ್ವರನ್ನ ಬಂಧಿಸಿದ್ದಾರೆ.
ಇರ್ಫಾನ್ ಅಹ್ಮದ್ ಭಟ್, ಸಜದ್ ಅಹ್ಮದ್ ಮಿರ್, ಇರ್ಫಾನ್ ಅಹ್ಮದ್ ಜಾನ್ ಎಂಬುವರು ಅಷ್ಟಾಂಗೋದಲ್ಲಿ ಬಂಧಿತರಾದವರಾಗಿದ್ದು, ಇರ್ಫಾನ್ ಅಜೀಜ್ ಭಟ್ ಬಂಧಿತರು. ಇವರು ಜಿಲ್ಲೆಯಲ್ಲಿನ ಲಷ್ಕರ್ ಇ ತೊಯಬಾ ಸಂಘಟನೆಗೆ ಸಾಗಣೆಗೆ, ಸಂಚಾರಕ್ಕೆ ಸಹಾಯ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಮೂವರನ್ನು ಬಂಡಿಪೋರಾದ ಅಷ್ಟಾಂಗೋ ಎಂಬ ಪ್ರದೇಶದಲ್ಲಿ ಬಂಧಿಸಿದ್ದಾರೆ. ಹಾಗೇ ಇನ್ನೊಬ್ಬಾತನನ್ನು ರಾಖ್ ಹಾಜಿನ್ ಎಂಬಲ್ಲಿ ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ ಚೈನೀಸ್ ಗ್ರನೇಡ್ ವಶಪಡಿಸಿಕೊಳ್ಳಲಾಗಿದೆ.
ಇದರಲ್ಲಿ ಅಜೀಜ್ ಭಟ್ ಪಾಕಿಸ್ತಾನಿ ಮೂಲದ ಉಗ್ರ ಉಮರ್ ಲಾಲಾ ಮತ್ತು ಕಾಶ್ಮೀರದ ಹಾಜಿನ್ನ ಭಯೋತ್ಪಾದಕನಾಗಿದ್ದ ಮೃತ ಸಲೀಂ ಪರ್ರೆಯೊಟ್ಟಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದವನಾಗಿದ್ದ. ಈಗಂತೂ ಪಾಕಿಸ್ತಾನದಲ್ಲಿರುವ ತನ್ನ ಸಹಚರರೊಂದಿಗೆ ಸೇರಿಕೊಂಡು ಹಾಜಿನ್ನಲ್ಲಿ ಹಲವು ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ.