ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನಾಚರಣೆ ಆಚರಿಸಿಕೊಳ್ಳಲು ಸಿದ್ಧರಾಗಿದ್ದು, ರಾಷ್ಟ್ರದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ನಾಲ್ಕು ಮಹತ್ವದ ಆರೋಗ್ಯ ಉಪಕ್ರಮ ಜಾರಿಗೆ ಮುಂದಾಗಿದ್ದಾರೆ.
1. ಆಯುಷ್ಮಾನ್ ಆಪ್ಕೆ ದ್ವಾರ್ 3.0 – ನಿಮ್ಮ ಮನೆ ಬಾಗಿಲಿಗೆ ಆರೋಗ್ಯ
ಆಯುಷ್ಮಾನ್ ಆಪ್ಕೆ ದ್ವಾರ್ 3.0 ಜನರು ಎಲ್ಲೇ ವಾಸಿಸುತ್ತಿದ್ದರೂ ಆರೋಗ್ಯ ಸೇವೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಇದರ ಉದ್ಧೇಶವಾಗಿದೆ. ಯೋಜನೆಯ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ಗಳನ್ನು ಒದಗಿಸಲಾಗುತ್ತದೆ.
2. ಸೇವಾ ಪಖ್ವಾಡ್ – ಹದಿನೈದು ದಿನಗಳ ಸೇವೆ
“ಸೇವಾ ಪಖ್ವಾಡ್ ” ಎರಡು ವಾರಗಳ ಅವಧಿಯ ಆರೋಗ್ಯ ರಕ್ಷಣೆಯ ಅಭಿಯಾನವಾಗಿದ್ದು, ಪ್ರಧಾನಿ ಮೋದಿ ಅವರ ಜನ್ಮದಿನದಂದು ಪ್ರಾರಂಭವಾಗಲಿದೆ ಮತ್ತು ಅಕ್ಟೋಬರ್ 2 ರಂದು ಗಾಂಧಿ ಜಯಂತಿಯವರೆಗೆ ಮುಂದುವರಿಯುತ್ತದೆ.
3. ಆಯುಷ್ಮಾನ್ ಮೇಳ – ಆರೋಗ್ಯ ರಕ್ಷಣೆಯನ್ನು ಹತ್ತಿರ ತರುವುದು
ಆಯುಷ್ಮಾನ್ ಮೇಳ”ವನ್ನು ರಾಷ್ಟ್ರದಾದ್ಯಂತ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ (HWCs) ಆಯೋಜಿಸಲಾಗುವುದು. ಈ ಘಟನೆಗಳು ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಜನರನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ವೇದಿಕೆಯನ್ನು ಒದಗಿಸುತ್ತದೆ.
4. ಆಯುಷ್ಮಾನ್ ಸಭಾ – ಆರೋಗ್ಯ ರಕ್ಷಣೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆ
ಆಯುಷ್ಮಾನ್ ಸಭಾ”, ಆರೋಗ್ಯ ರಕ್ಷಣೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿಹೇಳುತ್ತದೆ. ಸಾರ್ವಜನಿಕ ಒಳಗೊಳ್ಳುವಿಕೆಯ ಮೂಲಕ, ಆರೋಗ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಲಾಗಿದೆ.