ಮಂಡ್ಯ: ವಿಶ್ವಕ್ಕೆ ಕೊರೊನಾ ಎಂಟ್ರಿಕೊಟ್ಟಾಗ ಜನರು ರೆಮ್ಡಿಸಿವರ್ ಎಂಬ ಇಂಜೆಕ್ಷನ್ ಗಾಗಿ ಪರದಾಟ ನಡೆಸಿದ್ದರು. ಹಲವು ಖಾಸಗಿ ಆಸ್ಪತ್ರೆಯಲ್ಲಿ 1 ರಿಂದ 2 ಲಕ್ಷ ರೂ. ವರೆಗೆ ಹಣ ತೆಗೆದುಕೊಂಡು ಈ ಔಷಧಿ ನೀಡಿದ್ದರು. ಆದರೆ, ಸದ್ಯ 40 ಲಕ್ಷ ರೂ. ಮೌಲ್ಯದ ಅವಧಿ ಮುಗಿದ ಔಷಧಿಯು ಮಂಡ್ಯದ ಮಿಮ್ಸ್ನ ಔಷಧಿ ಉಗ್ರಾಣದಲ್ಲಿ ಇಪತ್ತೆಯಾಗಿದೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಅವಧಿ ಮೀರಿದ ಲಕ್ಷಾಂತರ ರೂ. ಮೌಲ್ಯದ ಮೆಡಿಸಿನ್ ಇದ್ದು, ಅಧಿಕಾರಿಗಳು ಏಜೆನ್ಸಿಯವರೊಂದಿಗೆ ಮೆಡಿಕಲ್ ಮಾಫಿಯಾದಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಕೇಶವಮೂರ್ತಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಮಿಮ್ಸ್ನ ಔಷಧಿ ಉಗ್ರಾಣದ ಮೇಲೆ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆದಿತ್ತು.
ಕೊರೊನಾ ಕಾಲದಲ್ಲಿ ಬಹು ಬೇಡಿಕೆ ಇದ್ದ ರೆಮ್ಡಿಸಿವರ್ ಇಂಜೆಕ್ಷನ್ ಅವಧಿ ಮೀರಿ ಈಗ ಇರುವುದು ಕಂಡು ಬಂದಿದೆ. ಬರೋಬ್ಬರಿ 40 ಲಕ್ಷ ಮೌಲ್ಯದ ರೆಮ್ಡಿಸಿವರ್ ಇಂಜೆಕ್ಷನ್ ಅವಧಿ 2022ರಲ್ಲಿಯೇ ಮುಕ್ತಾಯವಾಗಿದೆ. ಆದರೆ, ಕೊರೊನಾ ಸಂದರ್ಭದಲ್ಲಿ ಈ ಇಂಜೆಕ್ಷನ್ ಕೇಳಿದರೆ ಮಿಮ್ಸ್ನ ಅಧಿಕಾರಿ ವರ್ಗ ನಮ್ಮ ಬಳಿ ಸ್ಟಾಕ್ ಇಲ್ಲ ಎಂಬ ಮಾತು ಹೇಳುತ್ತಿತ್ತು. ಆದರೆ, ಈಗ ಇಷ್ಟೊಂದು ಪ್ರಮಾಣದಲ್ಲಿ ಔಷಧಿ ಕಂಡು ಬಂದಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ ಹಾಗೂ ಅನುಮಾನ ಮೂಡುತ್ತಿದೆ.
ಲೋಕಾಯುಕ್ತ ದಾಳಿ ವೇಳೆ 40 ಲಕ್ಷ ರೂ. ಮೌಲ್ಯದ ಅವಧಿ ಮುಗಿದ ಔಷಧಿ ಪತ್ತೆ ಮಂಡ್ಯ: ವಿಶ್ವಕ್ಕೆ ಕೊರೊನಾ ಎಂಟ್ರಿಕೊಟ್ಟಾಗ ಜನರು ರೆಮ್ಡಿಸಿವರ್ ಎಂಬ ಇಂಜೆಕ್ಷನ್ ಗಾಗಿ ಪರದಾಟ ನಡೆಸಿದ್ದರು. ಹಲವು ಖಾಸಗಿ ಆಸ್ಪತ್ರೆಯಲ್ಲಿ 1 ರಿಂದ 2 ಲಕ್ಷ ರೂ. ವರೆಗೆ ಹಣ ತೆಗೆದುಕೊಂಡು ಈ ಔಷಧಿ ನೀಡಿದ್ದರು. ಆದರೆ, ಸದ್ಯ 40 ಲಕ್ಷ ರೂ. ಮೌಲ್ಯದ ಅವಧಿ ಮುಗಿದ ಔಷಧಿಯು ಮಂಡ್ಯದ ಮಿಮ್ಸ್ನ ಔಷಧಿ ಉಗ್ರಾಣದಲ್ಲಿ ಇಪತ್ತೆಯಾಗಿದೆ.