ಒಟ್ಟಿಗೆ SSLC ಪರೀಕ್ಷೆ ಕಟ್ಟಿದ ತಂದೆ, ಮಗ – ಅಪ್ಪ ಪಾಸ್ ,ಮಗ ಫೇಲ್…..
1 min read
ಒಟ್ಟಿಗೆ SSLC ಪರೀಕ್ಷೆ ಕಟ್ಟಿದ ತಂದೆ, ಮಗ – ಅಪ್ಪ ಪಾಸ್ ,ಮಗ ಫೇಲ್…..
ಓದುವುದಕ್ಕೆ ವಯಸ್ಸಿನ ಹಂಗಿಲ್ಲ ಎನ್ನುವ ಸ್ಟೋರಿಗಳನ್ನ ನಾವು ಹಲವು ಭಾರಿ ಕೇಳಿರುತ್ತೇವೆ. ಈಗ ಅಂಥದೇ ಸ್ಟೋರಿಯೊಂದು ಪುಣೆಯಲ್ಲಿ ಘಟಿಸಿದೆ. ಮಹಾರಾಷ್ಟ್ರದ ಪುಣೆಯಲ್ಲಿ 43 ವರ್ಷದ ಅಪ್ಪ ಮತ್ತು ಮಗ ಒಂದೇ ಭಾರಿ SSLC ಪರೀಕ್ಷೆಯನ್ನ ತೆಗೆದುಕೊಂಡಿದ್ದರು ಆದರೆ ಅಪ್ಪ ಪಾಸ್ ಆಗಿದ್ದ ಮಗ ಫೇಲ್ ಆಗಿದ್ದಾನೆ.
ಪುಣೆ ನಗರದ ಬಾಬಾಸಾಹೇಬ್ ಅಂಬೇಡ್ಕರ್ ಡಯಾಸ್ ಪ್ಲಾಟ್ ನಿವಾಸಿ ಭಾಸ್ಕರ್ ವಾಘಮಾರೆ ಹಲವು ಕಾರಣಗಳಿಂದ 7 ತರಗತಿಗೆ ವಿದ್ಯಾಬ್ಯಾಸವನ್ನ ನಿಲ್ಲಿಸಿದ್ದರು. ಕುಟುಂಬದ ಜವಬ್ದಾರಿಗಳನ್ನ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದರು.
30 ವರ್ಷಗಳ ನಂತರ ಓದು ಮುಂದುವರೆಸಲು ನಿರ್ಧರಿಸಿದ ಭಾಸ್ಕರ್ ತಮ್ಮ ಮಗನೊಂದಿಗೆ ಈ ಭಾರಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಶುಕ್ರವಾರ ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು, ಭಾಸ್ಕರ್ ವಾಘಮಾರೆ ಪಾಸ್ ಆಗಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಓದಬೇಕೆಂಬ ಆಸೆ ಇತ್ತು. ಆದರೆ ಕುಟುಂಬದ ಜವಾಬ್ದಾರಿಗಳಿಂದ ಮತ್ತು ಜೀವನವನ್ನು ಸಾಗಿಸಲು ಓದಲು ಸಾಧ್ಯವಾಗಲಿಲ್ಲ. ಕೆಲ ದಿನಗಳ ಹಿಂದೆ ಮತ್ತೆ ಓದುವುದನ್ನು ಆರಂಭಿಸಬೇಕು ಎಂದುಕೊಂಡಿದ್ದೆ. ಆದ್ದರಿಂದ 10ನೇ ತರಗತಿ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಇದೇ ವೇಳೆ ನನ್ನ ಮಗ ಕೂಡ 10ನೇ ತರಗತಿ ಪರೀಕ್ಷೆ ಹಾಜರಾಗುತ್ತಿದ್ದನು ಮತ್ತು ಇದು ನನಗೆ ಸಹಾಯಕವಾಗಿತ್ತು. ಕೆಲಸ ಮುಗಿಸಿ ಮನೆಗೆ ಬಂದ ನಂತರ ನಾನು ಪ್ರತಿದಿನ ಓದುತ್ತಿದ್ದೆ. ನನ್ನ ಮಗನಿಗೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬೆಂಬಲಿಸುತ್ತೇನೆ ಮತ್ತು ಅವನು ಕೂಡ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾನೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ತಂದೆ ಪಾಸ್ ಆದ ಕುರಿತು ಮಾತನಾಡಿದ ಭಾಸ್ಕರ್ ವಾಘಮಾರೆ ಅವರ ಮಗ ಸಾಹಿಲ್ ನನ್ನ ತಂದೆ ಅಂದುಕೊಂಡಿದ್ದನ್ನು ಸಾಧಿಸಿರುವುದನ್ನು ಕಂಡು ನನಗೆ ಸಂತಸವಾಗಿದೆ. ನಾನು ಪೂರಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಎಲ್ಲಾ ಪರೀಕ್ಷೆಯಲ್ಲೂ ಉತ್ತೀರ್ಣನಾಗಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾನೆ