4ನೇ ಟೆಸ್ಟ್ ಪಂದ್ಯ : ಬ್ಯಾಟಿಂಗ್ ಆರಂಭಿಸಿದ ಇಂಡಿಯಾಗೆ ಆಘಾತ
ಓವಲ್ : ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತಿರುವ ಭಾರತ ಬ್ಯಾಟಿಂಗ್ ಆರಂಭಿಸಿದೆ.
ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ರೂಟ್, ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ್ದಾರೆ. ಸದ್ಯ ಟೀಂ ಇಂಡಿಯಾ 28 ರನ್ ಗೆ 1 ವಿಕೆಟ್ ಕಳೆದುಕೊಂಡಿದೆ.
ಇನ್ನು ಟೀಮ್ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ತಂಡ: 1 ರೋರಿ ಬನ್ರ್ಸ್, 2 ಹಸೀಬ್ ಹಮೀದ್, 3 ಡೇವಿಡ್ ಮಲಾನ್, 4 ಜೋ ರೂಟ್ (ನಾಯಕ), 5 ಒಲೀ ಪೋಪ್, 6 ಜಾನಿ ಬೆಸ್ಟೊ, 7 ಮೊಯಿನ್ ಅಲಿ, 8 ಕ್ರಿಸ್ ವೋಕ್ಸ್, 9 ಕ್ರೇಗ್ ಓವರ್ಟನ್, 10 ಒಲ್ಲಿ ರಾಬಿನ್ಸನ್, 11 ಜೇಮ್ಸ್ ಆಂಡರ್ಸನ್
ಭಾರತ ತಂಡ: 1 ಕೆ.ಎಲ್. ರಾಹುಲ್, 2 ರೋಹಿತ್ ಶರ್ಮಾ, 3 ಚೆತೇಶ್ವರ ಪೂಜಾರ, 4 ವಿರಾಟ್ ಕೊಹ್ಲಿ (ನಾಯಕ), 5 ಅಜಿಂಕ್ಯ ರಹಾನೆ, 6 ರಿಷಭ್ ಪಂತ್, 7 ರವೀಂದ್ರ ಜಡೇಜಾ, 8 ಶಾರ್ದೂಲ್ ಠಾಕೂರ್, 9 ಉಮೇಶ್ ಯಾದವ್, 10 ಜಸ್ಪ್ರೀತ್ ಬೂಮ್ರಾ, 11 ಮೊಹಮ್ಮದ್ ಸಿರಾಜ್