WhatsApp features: 5 ಹೊಸ ಫೀಚರ್ಸ ಗಳನ್ನ ಪರಿಚಯಿಸುತ್ತಿದೆ WhatsApp – ಓದಿ..
ಬಳಕೆದಾರರಿಗೆ ಉತ್ತಮ ಅನುಭವ ನೀಡಲು WhatsApp ಹೊಸ ನವೀಕರಣಗಳನ್ನ ಬಿಡುಗಡೆ ಮಾಡಲು ಸಿದ್ದವಾಗಿದೆ, ಸಂದೇಶಗಳನ್ನ ಎಡಿಟ್ ಮಾಡುವುದು, ಗ್ರೂಪ್ ಗಳ ಮೆಂಬರ್ ಗಳ ಸಂಖ್ಯೆ, ಸ್ಕೀನ್ ಶಾಟ್ ಮತ್ತು ಪ್ರೀಮಿಯಂ ಚಂದಾದಾರಿಕೆ ಸೇರಿದಂತೆ ಹಲವು ವಿಷಯಗಳ ಮೇಲೆ ಅಪ್ಡೇಟ್ ಬಿಡುಗಡೆಯಾಗಲಿದೆ. ಈ ವೈಶಿಷ್ಟ್ಯಗಳು ಪ್ರಸ್ತುತ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದ್ದು, ಅಭಿವೃದ್ಧಿ ಹಂತದಲ್ಲಿವೆ.
ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿರುವ ಮುಂಬರುವ WhatsApp ಫೀಚರ್ಸ್ ಗಳನ್ನ ನೋಡುವುದಾದರೇ.
1. ಕಳುಹಿಸಿದ ನಂತರ ಸಂದೇಶಗಳನ್ನ ಸಂಪಾದಿಸಿ, (Edit messages after sending)
ವಾಟ್ಸಾಪ್ ಈಗ ತನ್ನ ಬಳಕೆದಾರರಿಗೆ ತಮ್ಮ ಸಂದೇಶಗಳನ್ನು ಕಳುಹಿಸಿದ ನಂತರ ಅವುಗಳನ್ನು ಸಮಯದ ಚೌಕಟ್ಟಿನೊಳಗೆ ಎಡಿಟ್ ಮಾಡಲು ಅನುಮತಿ ಕೊಡುತ್ತಿದೆ. ಸಂದೇಶಗಳನ್ನು ಕಳುಹಿಸಿದ 15 ನಿಮಿಷಗಳಲ್ಲಿ ಸಂದೇಶಗಳನ್ನ ಸಂಪಾದಿಸಿ ಮರು ಕಳುಹಿಸಬಹುದು.
2. WhatsApp ಗ್ರೂಪ್ ನಲ್ಲಿ ಭಾಗವಹಿಸುವವರ ಮಿತಿ ಹೆಚ್ಚಳ
ವಾಟ್ಸಾಪ್ ಗ್ರೂಪ್ ಗಳಲ್ಲಿ ಭಾಗವಹಿಸುವವರ ಮಿತಿಯನ್ನು ಹೆಚ್ಚಿಸಲು WhatsApp ಮತ್ತೆ ಯೋಜಿಸುತ್ತಿದೆ. ಪ್ರಸ್ತುತ, ಇದರ ಮಿತಿಯನ್ನು 512 ಸದಸ್ಯರಿಗಿದ್ದು, 1,024 ಸದಸ್ಯರಿಗೆ ಹೆಚ್ಚಿಸಲು ವಾಟ್ಸಾಪ್ ಯೋಜಿಸುತ್ತಿದೆ.
3. ಶೀರ್ಷಿಕೆಯೊಂದಿಗೆ ಡಾಕ್ಯುಮೆಂಟ್ ಹಂಚಿಕೆ (Document sharing with caption)
WhatsApp ತನ್ನ ಬಳಕೆದಾರರಿಗೆ ಫೋಟೋಗಳು, ವೀಡಿಯೊಗಳು ಮತ್ತು GIF ಗಳನ್ನು ಶೀರ್ಷಿಕೆಗಳೊಂದಿಗೆ (caption) ಕಳುಹಿಸಲು ಅನುಮತಿ ನೀಡಲಿದೆ. ಶೀಘ್ರದಲ್ಲೇ ಪ್ಲಾಟ್‌ಫಾರ್ಮ್ ಇದರ ಹೊಸ ಅಪ್‌ಡೇಟ್ ಹೊರತರಲಿದೆ.
4.ಸ್ಕ್ರೀನ್‌ಶಾಟ್ ನಿರ್ಬಂಧ
WhatsApp ಅಂತಿಮವಾಗಿ ಬಳಕೆದಾರರಿಗೆ ಹೆಚ್ಚು ಅಗತ್ಯವಿರುವ ವೈಶಿಷ್ಟ್ಯವನ್ನ ಹೊರತರುತ್ತಿದೆ. ಸುರಕ್ಷತೆಯನ್ನು ಸುಧಾರಿಸುವುದು ಮತ್ತು ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸಲು, ಪ್ಲಾಟ್‌ಫಾರ್ಮ್ ಈಗ ಎಲ್ಲಾ ಮೀಡಿಯಗಳಲ್ಲಿ “ಒಮ್ಮೆ ವೀಕ್ಷಿಸಿ” (View Once) ಫೋಟೋಗಳು ಮತ್ತು ವೀಡಿಯೊಗಳ ಸ್ಕ್ರೀನ್‌ಶಾಟ್‌ಗಳನ್ನ ತೆಗೆದುಕೊಳ್ಳದಂತೆ ಬಳಕೆದಾರರಿಗೆ ನಿರ್ಬಂಧಿಸುತ್ತಿದೆ.
5. WhatsApp ಪ್ರೀಮಿಯಂ ಚಂದಾದಾರಿಕೆ
WhatsApp ವ್ಯವಹಾರಗಳಿಗಾಗಿ (WhatsApp businesses) ಹೊಸ ಪ್ರೀಮಿಯಂ ಚಂದಾದಾರಿಕೆ ಯೋಜನೆಯನ್ನು ಹೊರತರಲು WhatsApp ಚಿಂತಿಸುತ್ತಿದೆ. WhatsApp ಪ್ರೀಮಿಯಂ ಆಯ್ದ ವ್ಯಾಪಾರ ಖಾತೆಗಳಿಗೆ ಲಭ್ಯವಿರಲಿದೆ.
5 WhatsApp features launching very soon: