ಐದು ವರ್ಷದ ಪುಟ್ಟ ಬಾಲಕನನ್ನ ಕಚ್ಚಿಕೊಂದ ಬೀದಿ ನಾಯಿಗಳು…
ಶನಿವಾರ ಐದು ವರ್ಷದ ಪುಟ್ಟ ಬಾಲಕನನ್ನು ಬೀದಿನಾಯಿಗಳು ಎಳೆದಾಡಿ ಕಚ್ಚಿಕೊಂದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಟೋಲ್ ಪಟ್ಟಣದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗ್ಪುರದಿಂದ ಸುಮಾರು 60 ಕಿಮೀ ದೂರದಲ್ಲಿರುವ ಧಂತೋಳಿ ಪ್ರದೇಶದಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿರಾಜ್ ರಾಜು ಜಯವರ್(05) ಎಂಬ ಬಾಲಕ ತನ್ನ ಸಹೋದರಿಯೊಂದಿಗೆ ವಾಕಿಂಗ್‌ಗೆ ತೆರಳಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿವೆ. ಸಹೋದರಿ ನಾಯಿಗಳನ್ನ ಓಡಿಸಲು ಯತ್ನಿಸಿದಾ ನಾಯಿಗಳು ಮಗುವನ್ನ ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದು ಕಚ್ಚಿ ಕೊಂದಿವೆ.
ಪೋಷಕರು ಮತ್ತು ಸ್ಥಳಿಯರು ಸ್ಥಳಕ್ಕೆ ಧಾವಿಸಿದರು ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ಕಟೋಲ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.