ಬಿಗ್ ಬಿ ಮಗಳಿಗೆ 50 ಕೋಟಿ ರೂ. ಮನೆಯನ್ನು ಗಿಫ್ಟ್ ನೀಡಿದ್ದಾರೆ.
ಬಚ್ಚನ್ ಅವರು ರಿಯಲ್ ಎಸ್ಟೇಟ್ ಮೇಲೆ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಬಚ್ಚನ್ ಹೆಸರಿನಲ್ಲಿ ಅಪಾರ್ಟ್ಮಿಂಟ್ಗಳಿವೆ ಆದರೆ ಅವರು ವಾಸಕ್ಕೆ ಬಳಸುವುದು ಎರಡು ಮನೆಗಳು ಮಾತ್ರ. ಇದರಲ್ಲೊಂದು ಮನೆಯಲ್ಲಿ ಅಮಿತಾಬ್ ಬಚ್ಚನ್ ತಮ್ಮ ಪುತ್ರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಪುತ್ರಿ ಶ್ವೇತಾ ನಂದಾಗೆ ತಮ್ಮ ಪ್ರತೀಕ್ಷಾ ಬಂಗ್ಲೆ ಉಡುಗೊರೆಯಾಗಿ ನೀಡಿದ್ದಾರೆ. ದಶಕಗಳ ಹಿಂದೆ ಬಂಗ್ಲೆ ನಿರ್ಮಿಸಿಕೊಂಡಿದ್ದರು. ಇದು ಅವರಿಗೆ ಅಕ್ಕರೆಯ ಮನೆ. ಈಗ ಆ ಪ್ರೀತಿಯ ಮನೆಯನ್ನು ತಮ್ಮ ಪ್ರೀತಿಯ ಮಗಳಿಗೆ ನೀಡಿದ್ದಾರೆ. ಉಡುಗೊರೆಯಾಗಿ ನೀಡಿರುವ ಸ್ಥಳದ ಈಗಿನ ಅಧಿಕೃತ ಮೌಲ್ಯ ಸುಮಾರು 50.63 ಕೋಟಿ ಎನ್ನಲಾಗುತ್ತಿದೆ.
ಇದರ ಜಾಗ ಮತ್ತು ಬಂಗ್ಲೆ ಒಟ್ಟು 1,564 ಚದರ ಅಡಿಗಳಿವೆ.