ಬಾಲಕಿ ಮೇಲೆ ಅತ್ಯಾಚರವೆಸಗಿದ 50 ವರ್ಷದ ಕಾಮುಕ
ತೆಲಂಗಾಣ: 50 ವರ್ಷದ ವ್ಯಕ್ತಿಯೊಬ್ಬ 8 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯ ಮದನಪುರಂ ವಲಯದಲ್ಲಿ ನಡೆದಿದೆ.
ಶೇಖ್ ಮಚ್ಚನ್(50) ಅತ್ಯಾಚಾರವೆಸಗಿದ ಆರೋಪಿ. ಆರೋಪಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಮಗುವಿನ ಖಾಸಗಿ ಅಂಗದಲ್ಲಿ ಬಾಲಕಿಗೆ ತೀರ್ವ ರಕ್ತಸ್ರಾವವಾಗಿದೆ. ಇದರಿಂದ ಹೆದರಿದ ಆರೋಪಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಈ ವೇಳೆ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದಾಗಿ ವೈದ್ಯರು ಮಾಹಿತಿ ತಿಳಿಸಿದ್ದಾರೆ.
ನಡೆದಿದ್ದೇನು?: ಬುಧವಾರ ಬೆಳಗ್ಗೆ ಬಾಲಕಿಯ ಪೋಷಕರು ಕೆಲಸಕ್ಕೆಂದು ಹೋಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಮಚ್ಚನ್ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದರ ಬೆನ್ನಲ್ಲೇ ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಹೀಗಾಗಿ ಹೆದರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಬಾಲಕಿಯನ್ನು ಪರೀಕ್ಷೆ ನಡೆಸಿದ ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ವನಪರ್ತಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಈ ಮಾಹಿತಿ ಕೇಳಿ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದರ ಬೆನ್ನಲ್ಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯ ಬಂಧನ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಎಸ್ಐ ಮಂಜುನಾಥ್ರೆಡ್ಡಿ ಮಾತನಾಡಿ ವನಪರ್ತಿಯ ರಾಮನ್ಪಾಡ್ ರೈಲ್ವೆ ಹಳಿ ಮೇಲೆ ವಿದ್ಯುದ್ದೀಕರಣ ಕಾಮಗಾರಿಗೋಸ್ಕರ ಛತ್ತೀಸ್ಗಢದಿಂದ 8 ವರ್ಷದ ಬಾಲಕಿ ಸಮೇತ ಅನೇಕರು ಬಂದಿದ್ದಾರೆ. ಇದರಲ್ಲಿ ಪಶ್ಚಿಮ ಬಂಗಾಳದ ಶೇಖ್ ಮಚ್ಚನ್ ಕೂಡ ಆಗಮಿಸಿದ್ದಾರೆ. ಇವರೆಲ್ಲರೂ ಒಟ್ಟಿಗೆ ವಾಸ ಮಾಡುತ್ತಿದ್ದಾರೆ.