ಜಿಂಬಾಬ್ವೆಯಲ್ಲಿ ವಿಮಾನ ಪತನವಾಗಿದ್ದು, ಭಾರತೀಯ ಗಣಿ ಉದ್ಯಮಿ ಸೇರಿದಂತೆ ಅವರ ಪುತ್ರ ಸೇರಿ 6 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ ಖಾಸಗಿ ವಿಮಾನ ತಾಂತ್ರಿಕ ದೋಷದ ನಂತರ ಪತವಾಗಿದೆ. ಸಾವನ್ನಪ್ಪಿದ 6 ವ್ಯಕ್ತಿಗಳಲ್ಲಿ ಭಾರತೀಯ ಬಿಲಿಯನೇರ್ ಹಾಗೂ ಅವರ ಮಗ ಸೇರಿದ್ದಾರೆ ಎನ್ನಲಾಗಿದೆ. ಜಿಂಬಾಬ್ವೆಯ ಮಶಾವಾ ಐಹರಾರೆ ಜ್ವಾಮಹಂಡೆ ಪ್ರದೇಶದಲ್ಲಿಯೇ ಈ ವಿಮಾನ ಪತವಾಗಿದೆ. ಚಿನ್ನ, ಕಲ್ಲಿದ್ದಲು, ನಿಕಲ್ ಹಾಗೂ ತಾಮ್ರ ಸಂಸ್ಕರಿಸುವ ವೈವಿಧ್ಯಮ ಗಣಿ ಕಂಪನಿಯಾಗಿರುವ ರಿಯೋ ಜಿಮ್ ನ ಮಾಲೀಕ ರಾಂಧವಾ ಹಾಗೂ ಅವರ ಮಗ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ರಿಯೊಜಿಮ್ ಮಾಲೀಕತ್ವದ ಸೆಸ್ನಾ 206 ವಿಮಾನವು ಹರಾರೆಯಿಂದ ಮುರೊವಾ ವಜ್ರದ ಗಣಿ ಮಾರ್ಗವಾಗಿ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಸಾವನ್ನಪ್ಪಿದವರ ಪೈಕಿ ನಾಲ್ವರು ವಿದೇಶಿಗರು ಹಾಗೂ ಇನ್ನಿತರ ಇಬ್ಬರು ಜಿಂಬಾಬ್ವೆಯವರು ಎನ್ನಲಾಗಿದೆ. ಸದ್ಯ ಅಲ್ಲಿನ ಪೊಲೀಸರು ಈ ಕುರಿತು ವರದಿ ಮಾಡಿದ್ದು, 6 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.