ಬೆಂಗಳೂರು: ರೈಲಿನಲ್ಲಿ ಸಾಗಾಟವಾಗುತ್ತಿದ್ದ 60 ಕೆಜಿ ಗಾಂಜಾವನ್ನು ರೈಲ್ವೇ ಪೊಲೀಸರು (Railway Police) ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಿದ್ದಾರೆ.
ಗಾಂಜಾದ ಐದು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ನಿತ್ಯಾನಂದ ದಾಸ್, ನಿಕೇಶ್ ರಾಣಾ, ಜಲಂಧರ್ ಕನ್ವರ್, ಸಾಗರ್ ಕನ್ವರ್, ರಾಜೇಶ್ ದಾಸ್ ಮತ್ತು ಅಮರ್ಜಿತ್ ಬಂಧಿತ ಆರೋಪಿಗಳು ಎನ್ನಲಾಗಿದೆ. ಐವರು ಆರೋಪಿಗಳು ಒಡಿಶಾದ ಮೂಲದವರು ಎನ್ನಲಾಗಿದೆ. ಓರ್ವ ತ್ರಿಪುರದವ ಮತ್ತು ಇನ್ನೊಬ್ಬ ಬಿಹಾರ ಮೂಲದವರು ಎನ್ನಲಾಗಿದೆ.
ಪ್ರಶಾಂತಿ ಎಕ್ಸ್‌ಪ್ರೆಸ್, ಶೇಷಾದ್ರಿ ಎಕ್ಸ್‌ಪ್ರೆಸ್ ಮತ್ತು ಶಾಲಿಮಾರ್-ವಾಸ್ಕೋ-ಡ-ಗಾಮಾ ಅಮರಾವತಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಗಾಂಜಾ ಪತ್ತೆಯಾಗಿವೆ. 60 ಲಕ್ಷ ರೂ. ಮೌಲ್ಯದ 60 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.