ಮದುವೆ ಮೆರವಣಿಗೆಯ ಡಿ ಜೆ ಸಂಗೀತಕ್ಕೆ ಬೆದರಿ ಕೋಳಿಗಳ ಮಾರಣಹೋಮ
ಒಡಿಶಾದಲ್ಲಿ ಮದುಮಗನ ಮರೆವಣಿಗೆಯಲ್ಲಿ ಕೇಳಿ ಬಂದ ಅಬ್ಬರದ ಡಿ ಜೆ ಸಂಗೀತದಿಂದಾಗಿ ಕನಿಷ್ಠ 60 ಬ್ರಾಯ್ಲರ್ ಕೋಳಿಗಳು ಸಾವನ್ನಪ್ಪಿರುವ ವಿಲಕ್ಷಣ ಘಟನೆ ಒಡಿಶಾದಲ್ಲಿ ನಡೆದಿದೆ.
ರವಿವಾರ ಕೋಳಿ ಫಾರಂ ಮಾಲೀಕ ರಂಜಿತ್ ಪರೀದಾ ಅವರ ನೆರೆಮನೆಯ ರಾಮಚಂದ್ರ ಪರಿದಾ ಅವರ ಮದುವೆ ಮೆರವಣಿಗೆಯಲ್ಲಿ ಡಿಜೆ ಸಂಗೀತದಿಂದ ಬಂದ ಶಬ್ದಕ್ಕೆ ಬೆದರಿ ಹೃದಯಾಘಾತದಿಂದ ಕೋಳಿಗಳು ಸಾವನ್ನಪ್ಪಿವೆ ಎಂದು ಕಂದಗರಡಿ ಗ್ರಾಮದ ನಿವಾಸಿ ನೀಲಗಿರಿ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಸಮೀಪದ ಮೈತಾಪುರ ಗ್ರಾಮದ ವಧು-ವರರು ಡಿಜೆ ಹಾಡುಗಳನ್ನ ಜೋರಾಗಿ ಹಾಕಿಕೊಂಡು ನನ್ನ ಗ್ರಾಮಕ್ಕೆ ಆಗಮಿಸಿದರು. ಜೊತೆಗೆ ಮದುಮಗನ ಕಡೆಯವರು ಕೂಡ ತೀವ್ರ ಪಟಾಕಿ ಸಿಡಿಸಿದ್ದಾರೆ. ನನ್ನ ಫಾರ್ಮ್ನಲ್ಲಿರುವ 2000 ಬ್ರಾಯ್ಲರ್ ಕೋಳಿಗಳಿಗೆ ಸಹಿಸಲಾಗದ ಶಬ್ದವನ್ನ ಉಂಟುಮಾಡಿದ್ದಾರೆ.
ಮದುವೆಯ ಮೆರವಣಿಗೆಯಲ್ಲಿ ಧ್ವನಿಯನ್ನು ಕಡಿಮೆ ಮಾಡಲು ನಾನು ವಿನಂತಿಸಿದೆ. ಆದರೆ, ಅವರೆಲ್ಲರೂ ಕುಡಿದು ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನ ಫಾರ್ಮ್ನಲ್ಲಿ ಭಯಭೀತರಾದ ಕೋಳಿಗಳು ಭಯದಿಂದ ಓಡಲು ಪ್ರಾರಂಭಿಸಿದವು ಮತ್ತು ಒಂದು ಗಂಟೆಯ ನಂತರ 63 ಕೋಳಿಗಳು ಸತ್ತು ಹೋಗಿವೆ. ಎಂದು ಕೋಳಿ ಫಾರಂ ಮಾಲಿಕ ತಿಳಿಸಿದರು.