ಏರ್ ಇಂಡಿಯಾದ ಅಂತಾರಾಷ್ಟ್ರೀಯ ಹಾರಾಟಗಳು ತಾಂತ್ರಿಕ ದೋಷ ಸೇರಿದಂತೆ ವಿವಿಧ ಕಾರಣಗಳಿಂದ ಇಂದು ಗಂಭೀರ ಸಮಸ್ಯೆಯಾಗಿ ಕಾಡಿದೆ. ಒಟ್ಟು 7 ಅಂತಾರಾಷ್ಟ್ರೀಯ ವಿಮಾನಗಳನ್ನು ಏರ್ ಇಂಡಿಯಾ ರದ್ದುಗೊಳಿಸಿರುವುದು ಮಾಹಿತಿಗಳಲ್ಲಿ ತಿಳಿದುಬಂದಿದೆ. ರದ್ದಾದ ವಿಮಾನಗಳಲ್ಲಿ 6 ಬೋಯಿಂಗ್ 787-8 ಡ್ರೀಮ್‌ಲೈನರ್ ಮಾದರಿಯ ವಿಮಾನಗಳಿದ್ದು, ಇದೊಂದು ಮಹತ್ವದ ವಿಚಾರವಾಗಿದೆ.
ತಾಂತ್ರಿಕ ದೋಷದಿಂದ ಉಂಟಾದ ವ್ಯತ್ಯಯ:
ಅಹಮದಾಬಾದ್‌ನಿಂದ ಲಂಡನ್‌ಗೆ ಮತ್ತು ದೆಹಲಿಯಿಂದ ಪ್ಯಾರಿಸ್‌ಗೆ ಹೊರಡಬೇಕಾದ ವಿಮಾನಗಳಲ್ಲಿ ತಾಂತ್ರಿಕ ತೊಂದರೆಗಳು ಪತ್ತೆಯಾಗಿವೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಎರಡು ವಿಮಾನಗಳ ಹಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ.
ಇನ್ನಷ್ಟು ವಿಮಾನಗಳು ಸಹ ರದ್ದು:
ಈ ತಾಂತ್ರಿಕ ಸಮಸ್ಯೆಯ ಪರಿಣಾಮವಾಗಿ, ಲಂಡನ್‌ನಿಂದ ಅಮೃತಸರಕ್ಕೆ ಬರುತ್ತಿದ್ದ ವಿಮಾನವನ್ನೂ ಹಾಗೂ ಬೆಂಗಳೂರಿನಿಂದ ಲಂಡನ್‌ಗೆ ಹೊರಡಬೇಕಿದ್ದ ಇನ್ನೊಂದು ವಿಮಾನವನ್ನೂ ಏರ್ ಇಂಡಿಯಾ ರದ್ದುಗೊಳಿಸಿದೆ. ಹೀಗಾಗಿ ಈ ವಿಮಾನಗಳಲ್ಲಿ ಪ್ರಯಾಣಿಸಲು ಕಾಯುತ್ತಿದ್ದ ನೂರಾರು ಪ್ರಯಾಣಿಕರು ನಿರಾಸೆಯಾಗಿದ್ದಾರೆ.
ಪ್ರಯಾಣಿಕರಿಗೆ ತೊಂದರೆ:
ಏರ್ ಇಂಡಿಯಾ ಈ ತಾಂತ್ರಿಕ ಸಮಸ್ಯೆಗಳ ಬಗ್ಗೆ ಕ್ಷಮೆ ಕೇಳಿದರೂ, ಪ್ರಯಾಣಿಕರಲ್ಲಿ ಅಸಹನೆ ಮೂಡಿದೆ. ಮುಂಚಿತವಾಗಿ ಯಾವುದೇ ಎಚ್ಚರಿಕೆ ನೀಡದೆ ವಿಮಾನಗಳು ಏಕಾಏಕಿ ರದ್ದುಪಡುವುದರಿಂದ ಪ್ರವಾಸಿಗರು, ಉದ್ಯೋಗಕ್ಕೆ ಹೊರಡುತ್ತಿದ್ದವರು, ಹಾಗೂ ವೈದ್ಯಕೀಯ ತುರ್ತು ಕೆಲಸಗಳಲ್ಲಿ ನಿರತವಾಗಿರುವವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.