ಅಯೋಧ್ಯೆ: ಅಯೋಧ್ಯೆಯಲ್ಲಿ ಭಾರತೀಯರ ಆರಾಧ್ಯ ದೈವ ರಾಮನ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸಕಲ ತಯಾರಿಗಳು ನಡೆಯುತ್ತಿವೆ.
ಈಗ 7 ಸಾವಿರ ಕೆಜಿ ರಾಮ ಹಲ್ವಾ ತಯಾರಿಸಲು ನಿರ್ಧರಿಸಲಿಗದೆ. ನಾಗ್ಪುರದ ಬಾಣಸಿಗ ವಿಷ್ಣು ಮನೋಹರ್ ಈ ಹಲ್ವಾ ತಯಾರಿಸಲಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ರಾಮ ಹಲ್ವಾ (Rama Halwa) ತಯಾರು ಮಾಡಲು 12 ಸಾವಿರ ಲೀಟರ್ ಸಾಮರ್ಥ್ಯದ ವಿಶೇಷ ಕಡಾಯಿ (ಕಡಾಯಿ) ಸಿದ್ಧವಾಗಿದೆ. 900 ಕೆ.ಜಿ ರವೆ, 1 ಸಾವಿರ ಕೆ.ಜಿ ತುಪ್ಪ, 1 ಸಾವಿರ ಕೆ.ಜಿ ಸಕ್ಕರೆ, 2 ಸಾವಿರ ಲೀಟರ್ ಹಾಲು, 2.5 ಸಾವಿರ ಲೀಟರ್ ನೀರು, 300 ಕೆಜಿ ಡ್ರೈ ಫ್ರೂಟ್ಸ್, 75 ಕೆಜಿ ಏಲಕ್ಕಿ ಪುಡಿ ಬಳಸಿ ಹಲ್ವಾ ತಯಾರಿಸಲಾಗುವುದು ಎಂದು ಹೇಳಿದ್ದಾರೆ.
ಈ ಹಲ್ವಾವನ್ನು ರಾಮಲಲ್ಲಾಗೆ ಅರ್ಪಿಸಿದ ನಂತರ ಒಂದೂವರೆ ಲಕ್ಷ ಜನರಿಗೆ ಪ್ರಸಾದ ವಿತರಣೆ ಮಾಡಲಾಗುದು. ಇದಕ್ಕೆ ನಾವು ʼಕರಸೇವೆಯಿಂದ ಪಾಕಸೇವೆʼ ಎಂದು ಹೆಸರಿಸಿದ್ದೇವೆ ಎಂದು ಹೇಳಿದ್ದಾರೆ.








