ಅತ್ತೆ- ಸೊಸೆ ಎಂದರೆ ಹಾವು-ಮುಂಗಸಿಗೆ ಹೋಲಿಸುತ್ತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ ಅತ್ತೆಯೇ ಸೊಸೆಗೆ ಪ್ರಾಣ ದಾನ ಮಾಡಿದ್ದಾರೆ.
ಮೂತ್ರಪಿಂಡ ವೈಫಲ್ಯದಿಂದ ಹೋರಾಡುತ್ತಿದ್ದ 43 ವರ್ಷದ ಸೊಸೆಗೆ 70 ವರ್ಷದ ಅತ್ತೆ ದಾನ ಮಾಡಿದ್ದಾರೆ. ಪ್ರಭಾ ಮೋಟಾ ತನ್ನ 43 ವರ್ಷದ ಸೊಸೆ ಅಮಿಷಾಗೆ ಕಿಡ್ನಿ ದಾನ ಮಾಡಿ ಜೀವ ಉಳಿಸಿದ್ದಾರೆ.
ಹೀಗಾಗಿ ಆಗಸ್ಟ್ 1 ರಂದು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅಮಿಷಾಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇರುವುದು ಪತ್ತೆಯಾದ ನಂತರ ಅಮೀಷಾ ಅವರ ಎರಡೂ ಮೂತ್ರಪಿಂಡಗಳು ಹಾನಿಯಾಗಿದ್ದವು. ಆದರೆ, ಶಸ್ತ್ರಚಿಕಿತ್ಸೆ ಮೂಲಕ ಅತ್ತೆ ಮೂತ್ರ ಪಿಂಡ ನೀಡಿದ್ದಾರೆ.
ಡಯಾಲಿಸಿಸ್ ಮಾಡಿದರೆ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಅತ್ತೆ ಪ್ರಭಾ ತನ್ನ ಸೊಸೆಗೆ ಕಿಡ್ನಿ ದಾನ ಮಾಡಲು ಮುಂದಾಗಿ, ಕಸಿ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳುವಂತೆ ಮಾಡಿದ್ದಾರೆ. ಸದ್ಯ ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.








