ನವದೆಹಲಿ: ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ನೂತನ ಸಂಸತ್ (New Parliament) ಭವನ ಉದ್ಘಾಟಿಸಿದ್ದಾರೆ. ಇದರ ಸಂತಸದ ಸ್ಮರಣಾರ್ಥವಾಗಿ ಅಂಚೆ ಚೀಟಿ (Postage Stamp) ಹಾಗೂ 75 ರೂ. ನಾಣ್ಯ (Rs 75 Coin) ಬಿಡುಗಡೆ ಮಾಡಿದ್ದಾರೆ.
ಬಿಡುಗಡೆಗೊಂಡಿರುವ ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸ ಹೊಂದಿದೆ. ಶೇ.50ರಷ್ಟು ಬೆಳ್ಳಿ, ಶೇ.40ರಷ್ಟು ತಾಮ್ರ, ಶೇ. 5 ನಿಕಲ್ ಮತ್ತು ಶೇ.5ರಷ್ಟು ಸತು ಬಳಸಿ ನಾಣ್ಯ ತಯಾರಿಸಲಾಗಿದೆ. ಈ ನಾಣ್ಯ 35 ಗ್ರಾಂ ತೂಕ ಹೊಂದಿದೆ.
ನಾಣ್ಯದ ಒಂದು ಬದಿ ಅಶೋಕ ಸ್ತಂಭದ ಸಿಂಹದ ಮುದ್ರೆ, ಸುತ್ತಲೂ ದೇವನಾಗರಿ ಲಿಪಿಯಲ್ಲಿ `ಭಾರತ್’ ಮತ್ತು ಇಂಗ್ಲಿಷ್‍ನಲ್ಲಿ `ಇಂಡಿಯಾ’ ಎಂದು ಬರೆಯಲಾಗಿದೆ. ಸಿಂಹದ ಮುದ್ರೆಯ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75 ಎಂದು ಮುದ್ರಿಸಲಾಗಿದೆ. ಅಲ್ಲದೆ ರೂ. ಚಿಹ್ನೆಯನ್ನು ಸಹ ಇರಿಸಲಾಗಿದೆ.
ಮತ್ತೊಂದು ಬದಿಯಲ್ಲಿ ಪಾರ್ಲಿಮೆಂಟ್‍ನ ಚಿತ್ರ ಮತ್ತು 2023ರ ಉಲ್ಲೇಖ ಮಾಡಲಾಗಿದೆ. ಇದು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವದ ಸಂಕೇತವೂ ಆಗಿರಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.