ಇತ್ತೀಚಿನ ದಿನಗಳಲ್ಲಿ ಒಬ್ಬಳೇ ಹೆಂಡತಿಯನ್ನು ನಿಭಾಯಿಸುವುದು ಕಷ್ಟ. ಆದರೆ, ಇಲ್ಲೊಬ್ಬ ವ್ಯಕ್ತಿ 6 ಜನ ಪತ್ನಿಯರಿಗಾಗಿ 81 ಲಕ್ಷ ರೂ ವೆಚ್ಚದ ಹಾಸಿಗೆ ಖರೀದಿಸಿದ್ದಾನೆ.
ಹೊಂದಾಣಿಕೆ ಇಲ್ಲದ ಕಾರಣ ಅದೆಷ್ಟೋ ಮದುವೆಗಳು ಮುರಿದು ಬಿದ್ದಿವೆ. ಅಂತಹುದರಲ್ಲಿ ಈ ಆಸಾಮಿ 6 ಜನ ಹೆಂಡತಿಯರ ಜೊತೆ ಮಲಗಲು ದೊಡ್ಡ ಬೆಡ್ ಕಸ್ಟ್ ಮೈಸ್ ಮಾಡಿಸಿದ್ದಾನೆ.
6 ಹೆಂಡತಿಯರ ಜೊತೆ ಮಲಗಲು 20 ಅಡಿ ಅಗಲ 7 ಅಡಿ ಉದ್ದದ ಬೆಡ್ ನ್ನ ರೆಡಿ ಮಾಡಿಸಿದ್ದಾನೆ. ಈ ಸ್ಪೆಷಲ್ ಬೆಡ್ ಗಾಗಿ ಬರೋಬ್ಬರಿ 80 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಹೆಂಡ್ತಿಯರಿಗೆ 80 ಲಕ್ಷ ಖರ್ಚು ಮಾಡಿರುವ ಈ ಭೂಪನ ಹೆಸರು ಅರ್ಥುರ್. ಮೂಲತಃ ಬ್ರೆಜಿಲ್ ದೇಶದವನು. ವೃತ್ತಿಯಲ್ಲಿ ಬಾಡಿ ಬಿಲ್ಡರ್. ಕೇವಲ್ ಬೆಡ್ ಗಾಗಿ ಮಾತ್ರವಲ್ಲ ಈತ ಈ ಹಿಂದೆಯೂ ಸುದ್ದಿಯಲ್ಲಿದ್ದ.
ಈ ಹಿಂದೆ 9 ಹೆಂಡ್ತಿರ ಮುದ್ದಿನ ಗಂಡ ಎಂದು ಸಖತ್ ಸುದ್ದಿಯಾಗಿದ್ದ. ಈತನಿಗೆ ಬರೋಬ್ಬರಿ 9 ಜನ ಹೆಂಡ್ತಿಯರು ಇದ್ದರು. ಆದರೆ ಅದರಲ್ಲಿ 4 ಜನ ಅರ್ಥುಲ್ ಗೆ ಡಿವೋರ್ಸ್ ಕೊಟ್ಟಿದ್ದಾರೆ. ಅಸಲಿಗೆ 6 ಹೆಂಡತಿಯ ಜೊತೆ ಸಮಯ ಕಳೆಯಲು ಹಾಗೂ ಪತ್ನಿಯರ ಜೊತೆ ಸಂಬಧ ಸರಿಯಾಗಲು ದೊಡ್ಡ ಬೆಡ್ ಖರಿದಿಸಿದ್ದನಂತೆ. ದೊಡ್ಡ ಬೆಡ್ ನಲ್ಲಿ ಕೂತು ಮಾತನಾಡುತ್ತ, ಟಿವಿ ನೋಡುತ್ತ ಸಮಯ ಕಳೆಯುತ್ತಾರಂತೆ. ಈ ದೊಡ್ಡ ಬೆಡ್ ನ್ನ 122 ಜನ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧ ಮಾಡಿದ್ದಾರೆ. ಸಂಸಾರ ತುಂಬಾ ಚೆನ್ನಾಗಿ ಇದೆ ಎಂದು ಅರ್ಥುರ್ ಹೇಳಿಕೊಂಡಿದ್ದಾರೆ.