ಕ್ಯಾನರಿ ದ್ವೀಪದ ಲಾ ಪಾಲ್ಮಾ ನೋಗಾಲ್ಸ್ ಸಮುದ್ರ ತೀರದಲ್ಲಿ ಸ್ಪರ್ಮ್ ತಿಮಿಂಗಿಲ ದೇಹದಲ್ಲಿ ತೇಲುವ ಚಿನ್ನ ಎಂದೇ ಕರೆಯುವ ಸುಮಾರು 9.5 ಕೆಜಿಗಳಷ್ಟು ಅಂಬರ್ಗೀಸ್ ಅನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಲಾಸ್ ಪಾಲ್ಮಾಸ್ ಯೂನಿರ್ವಸಿಟಿಯ ಪ್ರಾಣಿ ಆರೋಗ್ಯ ಮತ್ತು ಆಹಾರ ಭದ್ರತಾ ಸಂಸ್ಥೆಯ ಮುಖ್ಯಸ್ಥ ಆಂಟೊನಿಯೊ ಫೆರ್ನಾಂಡಿಸ್ ರೋಡ್ರಿಗಸ್, ತಿಮಿಂಗಿಲದ ಅಂಬರ್ ಗ್ರೀಸ್ ಅನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, 9.5 ಕೆಜಿ ತಿಮಿಂಗಿಲ ವಾಂತಿಯ ಮೌಲ್ಯ ಅಂದಾಜು 3 ಕೋಟಿ ರೂ. ಎನ್ನಲಾಗಿದೆ.
ಅಂಬರ್ ಗ್ರೀಸ್ ಎಂದು ಕರೆಯಲ್ಪಡುವ ವಾಂತಿಯು ಸುಮಾರು 10 ಕಿಲೋ ಗ್ರಾಮ್ ನಷ್ಟು ತೂಕವಿದ್ದು, ಇದು ತಿಮಿಂಗಿಲದ ಕರುಳಿನಲ್ಲಿ ಹುಣ್ಣಾಗಲು ಕಾರಣವಾಗಿದ್ದರಿಂದಾಗಿಯೇ ತಿಮಿಂಗಲು ಸಾವನ್ನಪ್ಪಿದೆ ಎನ್ನಲಾಗಿದೆ.
ಸ್ಪರ್ಮ್ ತಿಮಿಂಗಿಲದ ವಾಂತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ಮೌಲ್ಯ ಇದೆ. ಸ್ಪರ್ಮ್ ತಿಮಿಂಗಿಲದ ವಾಂತಿಯನ್ನು “ಅಂಬರ್ ಗ್ರೀಸ್” ಎಂದು ಕರೆಯಲಾಗುತ್ತಿದೆ. ಈ ಅಂಬರ್ ಗ್ರೀಸ್ ಅನ್ನು ಸೌಂದರ್ಯವರ್ಧಕ ವಸ್ತುಗಳ ತಯಾರಿಕೆ ಹಾಗೂ ಸುಗಂಧ ದ್ರವ್ಯ ತಯಾರಿಕೆ ಉದ್ಯಮದಲ್ಲಿ ಭಾರೀ ಬೇಡಿಕೆ ಹೊಂದಿದೆ. ಆದರೆ, ವಿಪರ್ಯಾಸ ಎಂದರೆ, ಈ ಅಂಗರ್ ಗ್ರೀಸ್ ವಸ್ತು ಹೇಗೆ ಉತ್ಪತ್ತಿಯಾಗುತ್ತದೆ ಎಂಬುವುದೇ ಇದುವರೆಗೂ ಕಂಡು ಹಿಡಿಯಲು ಆಗಿಲ್ಲ.








