M S Dhoni ಯಾಕೀ ನಿರ್ಧಾರ….!!!
ಈ ಬಾರಿಯ ಐಪಿಎಲ್ ಗೆ ಇನ್ನೇನು ಕೆಲವೇ ದಿನಗಳು ಬಾಕಿರುವಾಗಲೇ ಎಂ.ಎಸ್.ಧೋನಿ ಯಾರೂ ನಿರೀಕ್ಷೆ ಮಾಡಿರದ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.
ಚೆನ್ನೈ ತಂಡಕ್ಕೆ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಧೋನಿ, ಇದೀಗ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಧೋನಿ ಬದಲಿಗೆ ಜಡೇಜಾ ಸಿಎಸ್ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಇದನ್ನ ಚೆನ್ನೈ ಫ್ರಾಂಚೈಸಿ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದೆ.
ಈ ನಡುವೆ ಧೋನಿ ಅವರ ಈ ನಿರ್ಧಾರ ಅವರ ಅಭಿಮಾನಿಗಳನ್ನ ದಿಗ್ಭ್ರಮೆಗೊಳಿಸಿದೆ.
ಚೆನ್ನೈ ನಾಯಕತ್ವದಿಂದ ಧೋನಿ ಕೆಳಗಿಳಿದಿರೋ ಸತ್ಯವನ್ನ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಅಂದಹಾಗೆ ಧೋನಿಗೆ ಇದೇ ಕೊನೆಯ ಐಪಿಎಲ್ ಆಗುತ್ತದೆ ಎಂದು ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಿತ್ತು.
ಹೀಗಾಗಿ ಧೋನಿ ನಾಯಕರಾಗಿ ಈ ಸೀಸನ್ ಮುಗಿಸಲಿದ್ದಾರೆ ಎಂದು ಅಭಿಮಾನಿ ಭಾವಿಸಿದ್ದರು.
ಧೋನಿ ಪ್ರಶಸ್ತಿ ಗೆಲ್ಲಲಿ ಅಥವಾ ಗೆಲ್ಲದಿರಲಿ, ಧೋನಿ ನಾಯಕನಾಗಿ ಈ ಸೀಸನ್ ಮುಗಿಸಬೇಕಿತ್ತು ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ.
ಧೋನಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರೂ.. ಸಿಎಸ್ಕೆ ಆಟಗಾರನಾಗಿ.. ಮೆಂಟರ್ ಆಗಿ ತಂಡದಲ್ಲಿ ಕೆಲಸ ಮಾಡುತ್ತಾರೆ.
ಜಡೇಜಾ ನೇರ ನಾಯಕನಾದರೂ, ಧೋನಿ ಪರೋಕ್ಷವಾಗಿ ತಂಡವನ್ನು ಮುನ್ನಡೆಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಮತ್ತೊಂದೆಡೆ, ಜಡೇಜಾ 2012 ರಿಂದ ಸಿಎಸ್ಕೆಯಲ್ಲಿದ್ದಾರೆ. ರೈನಾ ನಂತರ ಧೋನಿಗೆ ಎರಡನೇ ಅತ್ಯಂತ ನಿಷ್ಠಾವಂತ ಆಟಗಾರ ಜಡೇಜಾ ಎಂದರೆ ಅತಿಶಯೋಕ್ತಿಯಲ್ಲ. ಹಾಗಾಗಿಯೇ ಜಡ್ಡುಗೆ ನಾಯಕತ್ವ ವಹಿಸಲಾಗಿದೆ. ms-dhoni-leaving-captaincy-csk