VIRAT ಸೆಂಚೂರಿಗಾಗಿ ಫುಡ್ ಕಿಟ್ ವಿತರಣೆ : KOHLI ಮೇಲಿನ ಅಭಿಮಾನಕ್ಕೆ ಸಾಕ್ಷಿ
ವಿರಾಟ್ ಕೊಹ್ಲಿ ಸೆಂಚೂರಿ ಬಾರಿಸಿ ಮೂರು ವರ್ಷಗಳೇ ಕಳೆದಿವೆ. ಇವತ್ತು ಸೆಂಚೂರಿ ಹೊಡೆಯುತ್ತಾರೆ.. ನಾಳೆ ಸೆಂಚೂರಿ ಹೊಡೆಯುತ್ತಾರೆ ಅಂದುಕೊಂಡ ಪ್ರತಿಬಾರಿ ವಿರಾಟ್ ಕೊಹ್ಲಿ ನಿರಾಸೆ ಮೂಡಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ಸೆಂಚೂರಿಗಾಗಿ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎದುರು ನೋಡುತ್ತಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತೆ ವಿಫಲಾರಾಗಿದ್ದಾರೆ.
ಇದರೊಂದಿಗೆ ವೆಸ್ಟ್ ಇಂಡೀಸ್ ಟಿ 20 ಸರಣಿಗೆ ವಿರಾಟ್ ಕೊಹ್ಲಿ ಅವರನ್ನ ಪಕ್ಕಕ್ಕೆ ಇಟ್ಟಿದ್ದಾರೆ.
ಇದು ಹೀಗಿದ್ದರೇ ವಿರಾಟ್ ಕೊಹ್ಲಿ ವೀರಾಭಿಮಾನಿ ಒಬ್ಬರು ವಿರಾಟ್ ಸೆಂಚೂರಿ ಬಾರಿಸಲಿ ಎಂದು ಹಸಿವಿನಿಂದ ಬಳಲುತ್ತಿರುವವರಿಗೆ ಫುಡ್ ಕಿಟ್ ಗಳನ್ನು ಕೊಡುತ್ತಿದ್ದಾರೆ. ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕೊಹ್ಲಿಗೆ ವೀರಾಭಿಮಾನಿಯಾಗಿರುವ ಒಬ್ಬ ಮಹಿಳೆ ಕೊಹ್ಲಿ ಹೆಸರಿನಲ್ಲಿ ಫುಡ್ ಕಿಟ್ ಗಳನ್ನು ನೀಡುತ್ತಿದ್ದಾರೆ.
ವಿರಾಟ್ ಹೇಗಾದ್ರೂ ಸೆಂಚೂರಿ ಬಾರಿಸಬೇಕು ಎಂದು ಫುಡ್ ಕಿಟ್ ಗಳನ್ನು ಹಂಚುತ್ತಿದ್ದಾರೆ. ಟ್ಟಿಟ್ಟರ್ ನಲ್ಲಿ ನೆಟ್ಟಿಗರೊಬ್ಬರು ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಫುಡ್ ಪ್ಯಾಕೆಟ್ ಗಳ ಮೇಲೆ ವಿರಾಟ್ ಕೊಹ್ಲಿ 71ನೇ ಸೆಂಚೂರಿಗಾಗಿ ಎಂದು ಬರೆಯಲಾಗಿದೆ. ನನ್ನ ಪುಣ್ಯದಿಂದಾದ್ರೂ ವಿರಾಟ್ ಕೊಹ್ಲಿ ಸೆಂಚೂರಿ ಬಾರಿಸಲಿ ಎಂದು ಆ ಮಹಿಳೆ ಬರೆದುಕೊಂಡಿದ್ದಾರೆ.