ಡಬ್ಬ ನನ್ ಮಕ್ಳು.. ಡಬ್ಬ ತರ ಮಾತಾಡ್ತೀರಾ : ನಟ ಆದಿತ್ಯ ಗರಂ
ಬೆಂಗಳೂರು : ನೀವೆಲ್ಲ ಯಾರು..? ಡಬ್ಬ ನನ್ ಮಕ್ಳು.. ಡಬ್ಬ ತರ ಮಾತಾಡ್ತೀರಾ ಎಂದು ಯುಟ್ಯೂಬ್ ನ ಕೆಲ ಚಿತ್ರವಿಮರ್ಶಕರ ವಿರುದ್ಧ ನಟ ಆದಿತ್ಯ ಫುಲ್ ಗರಂ ಆಗಿದ್ದಾರೆ.
ಮುಂದುವರೆದ ಅಧ್ಯಾಯ ಚಿತ್ರದ ಬಗ್ಗೆ ಕೆಲ ಡಿಜಿಟಲ್, ಯುಟ್ಯೂಬ್ ಚಿತ್ರ ವಿರ್ಮಷಕರು ನೆಗೆಟಿವ್ ರಿವ್ಯೂವ್ ಕೊಟ್ಟಿದ್ದು, ಈ ಬಗ್ಗೆ ಮುಂದುವರಿದ ಅಧ್ಯಾಯ ಚಿತ್ರತಂಡ ಫಿಲಂ ಚೇಂಬರ್ ಮೆಟ್ಟಿಲೇರಿದೆ. ಅಲ್ಲದೆ ಈ ಬಗ್ಗೆ ಲಿಖಿತ ರೂಪದಲ್ಲಿ ಚಿತ್ರತಂಡ ದೂರು ನೀಡಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಆದಿತ್ಯ, ಯೂಟ್ಯೂಬ್ ನಲ್ಲಿ ಕೆಲವರು ಎಲ್ಲಾ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ವಿಮರ್ಷೆ ನೀಡ್ತಿದ್ದಾರೆ. ಅವರ್ಯಾರು ರೆಪ್ಯೂಟೆಡ್ ಜರ್ನಲಿಸ್ಟ್ ಅಲ್ಲ. ಅವರಿಗೆ ವಿಮರ್ಶೆ ಕೊಡೋ ಹಕ್ಕು ಸಹ ಇಲ್ಲ. ಇದೊಂದು ಯೂಟ್ಯೂಬ್ ಲ್ಲಿ ಮಾಫಿಯಾ ಆಗ್ಬಿಟ್ಟಿದೆ. ಹೀಗಾದ್ರೆ ನಿರ್ಮಾಪಕರ ಗತೀ ಏನು ಎಂದು ಪ್ರಶ್ನಿಸಿದರು.
ಇನ್ನ ಚಿತ್ರ ವಿಮರ್ಷೆ ಮಾಡೋಕೆ ಪ್ರತಿಷ್ಠಿತ ವಾಹಿನಿಗಳಿವೆ, ಜರ್ನಲಿಸ್ಟ್ ಗಳಿದ್ದಾರೆ. ಸಿನಿಮಾ ಚೆನ್ನಾಗಿದ್ಯಾ ಇಲ್ವಾ ಅನ್ನೋದನ್ನ ಜನರು ಹೇಳ್ತಾರೆ ಎಂದು ಫುಲ್ ಗರಂ ಆಗಿದ್ದಾರೆ.
ಇದಲ್ಲದೆ ಈ ಕುರಿತು ವಿಡಿಯೋ ಒಂದು ಬಿಡುಗಡೆ ಮಾಡಿರುವ ಅವರು, ಯೂಟ್ಯೂಬ್ ಚಿತ್ರವಿಮರ್ಶಕರ ವಿರುದ್ಧ ಫುಲ್ ಗರಂ ಆಗಿದ್ದಾರೆ. ನೀವೆಲ್ಲ ಯಾರು..? ಡಬ್ಬ ನನ್ ಮಕ್ಳ..! ನಿಮಗೆಲ್ಲಾ ಕೆಲ ಇಲ್ಲ ಅಂದ್ರೆ ನಾನೇ ಕೆಲಸ ಕೊಡ್ತೀನಿ. ಕಷ್ಟಪಟ್ಟು ಚಿತ್ರ ಮಾಡೋರ ಕಷ್ಟ ಗೊತ್ತಾ ನಿಮಗೆ.. ಎಂದು ಯುಟ್ಯೂಬ್ ನಲ್ಲಿ ಕೆಲ ಚಿತ್ರ ವಿಮರ್ಶಕರಿಗೆ ನಟ ಚಾಟಿಬೀಸಿದ್ದಾರೆ.