ಐಸಿಸಿ ಏಕದಿನ ವಿಶ್ವಕಪ್ಗೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಹಲವಾರು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿವೆ.ತಮ್ಮ ರಾಜ್ಯಗಳ ಕ್ರೀಡಾಂಗಣಗಳಿಗೆ ವಿಶ್ವಕಪ್ ಹಕ್ಕು ಆತಿಥ್ಯ ನೀಡದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿವೆ.
ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ 10 ನಗರಗಳಲ್ಲಿ ವಿಶ್ವಕಪ್ ನಡೆಯಲಿದೆ. 1996ರಿಂದಲೂ ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸ್ತುತಾ ಬಂದಿದ್ದ ಮೊಹಾಲಿ, ರಾಜ್ಕೋಟ್, ಇಂದೋರ್, ನಾಗ್ಪುರ, ರಾಂಚಿ ಹಾಗೂ ಪ್ರಮುಖ ಮೈದಾನಗಳಿಗೆ ಆತಿಥ್ಯ ಸಿಕ್ಕಿಲ್ಲ. ಕೇವಲ ಮೆಟ್ರೊ ಹಾಗೂ ಬಿಸಿಸಿಐ ಪ್ರತಿನಿಸುವ ಪದಾಧಿಕಾರಿಗಳ ರಾಜ್ಯಗಳಿಗೆ ಪಂದ್ಯಗಳ ಆತಿಥ್ಯ ನೀಡಲಾಗಿದೆ. ಮಹಾ ಟೂರ್ನಿಯ ಆತಿಥ್ಯ ಸಿಗಲು ಸಹಕಾರ ನೀಡಿದ್ದೇವೆ. ಒಂದೂ ಪಂದ್ಯವೂ ಸಿಗಲಿಲ್ಲ. ಅಭ್ಯಾಸ ಪಂದ್ಯದ ಆತಿಥ್ಯವನ್ನು ಕೊಟ್ಟಿಲ್ಲ ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಬಿಸಿಸಿಐ ವಿರುದ್ಧ ಕಿಡಿಕಾರಿದೆ.
ಮಹತ್ವದ ಪಂದ್ಯಗಳೆಲ್ಲಾ ಅಹಮದಾಬಾದ್ನಲ್ಲಿ ನಡೆಯುತ್ತಿವೆ. ಇತ್ತೀಚೆಗೆ ಎಲ್ಲವೂ ಅಹಮದಾಬಾದ್ ಪಾಲಾಗುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಪಂಜಾಬ್ ಕ್ರೀಡಾ ಸಚಿವ ಗುರ್ ಮೀತ್ ಸಿಂಗ್ ಹೇಳಿದ್ದಾರೆ. ಇನ್ನು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ, ಇಂದೋರ್ ಕ್ರೀಡಾಂಗಣ ಶ್ರೀಮಂತ ಕ್ರಿಕೆಟ್ ಇತಿಹಾಸ ಹೊಂದಿದೆ. ಒಂದೂ ಪಂದ್ಯವಾದರೂ ಇಲ್ಲಿ ಆಡಿಸಬೇಕಿತ್ತು ಎಂದು ಮಂಡಳಿಯ ಅಕಾರಿಗಳು ಹೇಳಿದ್ದಾರೆ. ಮೊನ್ನೆ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ತಿರುವನಂತಪುರಂ ಮೈದಾನದಲ್ಲಿ ಆಡಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಆರೋಪಗಳಿಗೆ ಉತ್ತರಿಸಿರುವ ಬಿಸಿಸಿಐ ಉಪಾಧ್ಯಾಕ್ಷ ರಾಜೀವ್ ಶುಕ್ಲಾ, ಕೆಲ ಮೈದಾನಗಳು ವಿಶ್ವಕಪ್ಗೆ ಆಡಲು ಯೋಗ್ಯವಿರಲಿಲ್ಲ. ವಲಯಗಳ ಆಧಾರದ ಮೇಲೆ 12 ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಾಗಿದೆ. ಮೈದಾನಗಳ ಆಯ್ಕೆ ಹಿಂದೆ ಯಾವುದೇ ತಾರತಮ್ಯಘಿ, ದುರುದ್ದೇಶಗಳಿಲ್ಲ ಎಂದಿದ್ದಾರೆ.
ಕ್ರೀಡಾಂಗಣಗಳನ್ನು ಆಯ್ಕೆಮಾಡಿರುವುದು ಐಸಿಸಿ ಹೊರತು ಬಿಸಿಸಿಐ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಶ್ವಕಪ್ನಂಥ ದೊಡ್ಡ ಟೂರ್ನಿ ಕೆಲ ಮೈದಾನಗಳಲಷ್ಟೆ ನಡೆಸಲು ಸಾಧ್ಯ. ದೇಶದ 25 ಮೈದಾನಗಳು ಆಡಿಸಲು ಯೋಗ್ಯವಾಗಿವೆ ಎಂದರು.








