ಚಿಕ್ಕಮಗಳೂರು: ದತ್ತ ಜಯಂತಿಗೆ ಶಾಂತಿಯುತ ತೆರೆ ಬಿದ್ದಿದೆ.
ತಾಲೂಕಿನ (Chikkamagaluru) ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ (Datta Peeta) ಕಳೆದ 9 ದಿನಗಳಿಂದ ನಡೆಯುತ್ತಿದ್ದ ದತ್ತ ಜಯಂತಿಗೆ (Datta Jayanti) ಶಾಂತಿಯುತ ತೆರೆ ಬಿದ್ದಿದೆ.
ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ಧಾರ್ಮಿಕ ಹಾಗೂ ವಿವಾದಿತ ಪ್ರದೇಶ ದತ್ತ ಪೀಠದಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಭಾರೀ ಭದ್ರತೆ ನಡುವೆ ದತ್ತಪಾದುಕೆ ದರ್ಶನ ಪಡೆದು ಪುನೀತರಾಗಿದ್ದಾರೆ. ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರ ಕಣ್ಗಾವಲಿನಲ್ಲಿ 15 ಸಾವಿರ ದತ್ತ ಭಕ್ತರು ದರ್ಶನ ಪಡೆದಿದ್ದಾರೆ.
ಮಾಜಿ ಸಚಿವ ಸಿ.ಟಿ.ರವಿ ಅವರು ಹೊನ್ನಮ್ಮ ಹಳ್ಳದಿಂದ ಕಾಲ್ನಡಿಗೆ ಮೂಲಕ ಇರುಮುಡಿ ಹೊತ್ತು ಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದಿದ್ದಾರೆ.