ಮದ್ದೂರು:ಶಾಸಕ ಸಂಗಮೇಶ ಅವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಧರ್ಮದಲ್ಲಿ ಹುಟ್ಟಬೇಕು ಎಂಬ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಹಿರಿಯ ಮುಖಂಡ ಹಾಗೂ MLC ಸಿಟಿ ರವಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಸಿಟಿ ರವಿ,
ಸಂಗಮೇಶ ಅವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಧರ್ಮದಲ್ಲಿ ಹುಟ್ಟಬೇಕು ಅಂದಿದ್ದರೆ, ಅವರು ದನ ತಿನ್ನುವವನಾಗಿಯೇ ಹುಟ್ಟಬೇಕು. ಸರ್ಕಾರದ ಸುಳ್ಳಿಗೆ ನಾವು ಸುಳ್ಳು ಹೇಳೋಕ್ಕಾಗಲ್ಲ. ತಾತ್ಕಾಲಿಕವಾಗಿ ಕಲ್ಲು ತೂರಿದ ಆರೋಪಿಗಳನ್ನು ರಕ್ಷಣೆ ಮಾಡಬಹುದು, ಆದರೆ ಸತ್ಯವನ್ನು ಮರೆಮಾಡಲಾಗುವುದಿಲ್ಲ ಎಂದು ಕಿಡಿಕಾರಿದರು.
ಮಸೀದಿಯಿಂದ ಕಲ್ಲು ಹೊಡೆಯಲು BJP ಹೇಳಿತ್ತಾ? ಯಾವ ಮುಖ ಇಟ್ಟುಕೊಂಡು ಸರ್ಕಾರ ಈ ರೀತಿಯ ಸುಳ್ಳು ಮಾತುಗಳನ್ನು ಆಡುತ್ತಿದೆ? ಎಂದು ಅವರು ಪ್ರಶ್ನಿಸಿದರು.
ಶಾಸಕರ ಹೇಳಿಕೆ ಮತ್ತು ಸಿಟಿ ರವಿ ಅವರ ತೀವ್ರ ಪ್ರತಿಕ್ರಿಯೆಯಿಂದ ಮದ್ದೂರು ಪ್ರಕರಣ ರಾಜಕೀಯ ವಲಯದಲ್ಲಿ ಮತ್ತಷ್ಟು ಬಿಸಿಯಾಗಿದೆ.








