ಇತ್ತೀಚೆಗೆ ಮಾಂಸ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕರು ಮಾಂಸಪ್ರಿಯರಾಗುತ್ತಿದ್ದಾರೆ. ಹೀಗೆ ರೆಸ್ಟೋರೆಂಟ್ ನಲ್ಲಿ ಚಿಕನ್ ತಿಂದಿದ್ದ 13 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಕನ್ ತಿಂದ ಕೆಲವೇ ಹೊತ್ತಿನಲ್ಲಿ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಅಲ್ಲದೇ, ಹೊಟೇಲ್ ನಲ್ಲಿ ಊಟ ಸೇವಿಸಿದ್ದ 13 ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ಭಾನುವಾರ ರಾತ್ರಿ ಶವರ್ಮಾ ತಿಂದಿದ್ದು, ತಿಂದ ಕೆಲ ಹೊತ್ತಿನಲ್ಲಿಯೇ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಬಾಲಕಿಯನ್ನು ತಮಿಳುನಾಡಿನ ನಾಮಕ್ಕಲ್‌ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ ಎನ್ನಲಾಗಿದೆ.
ಬಾಲಕಿಯ ತಂದೆ ರೆಸ್ಟೋರೆಂಟ್‌ನಿಂದ ಹಲವಾರು ಮಾಂಸಾಹಾರಿ ಆಹಾರವನ್ನು ಮನೆಗೆ ತಂದಿದ್ದು, ಬಾಲಕಿ ಚಿಕನ್ ಶವರ್ಮಾ ತಿಂದಿದ್ದಾಳೆ. ಅಲ್ಲದೇ, 13 ಜನ ವಿದ್ಯಾರ್ಥಿಗಳು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕಾರಿಗಳು ತಕ್ಷಣ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ, ಆಹಾರದ ಮಾದರಿಗಳನ್ನು ಸಂಗ್ರಹಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.