ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿ ದಿನವಿಡಿ ಪೊಲೀಸರನ್ನ ಅಲೆದಾಡಿಸಿದ ಯುವತಿ
ಮಹರಾಷ್ಟ್ರ: ಗೆಳೆಯನನ್ನ ಮದುವೆಯಾಗಲು 19 ವರ್ಷದ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಸುಳ್ಳು ದೂರು ನೀಡಿ, ದಿನವಿಡಿ ಪೊಲೀಸರನ್ನ ಆಟವಾಡಿಸಿ ಘಟನೆ ಮಹರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕಲಾಂನಾ ಪೊಲೀಸ್ ಠಾಣೆಯಲ್ಲಿ ಯುವತಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ವಿಷಯದ ಗಂಭೀರತೆಯನ್ನು ಗ್ರಹಿಸಿದ ನಗರ ಪೊಲೀಸರು ತಕ್ಷಣ ಅದರ ತನಿಖೆಯನ್ನು ಪ್ರಾರಂಭಿಸಿದ್ದಾರೆ. ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸೇರಿದಂತೆ 1,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಪ್ರಕರಣದ ಬಗ್ಗೆ ತಲೆ ಕೆಡಿಸಿಕೊಂಡು ತನಿಖೆ ನಡೆಸಿದ್ದಾರೆ.
ನಗರದಾದ್ಯಂತ 250 ಕ್ಕೂ ಹೆಚ್ಚು ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ತನಿಖಾಧಿಕಾರಿಗಳು ಆಕೆಯೇ ಸಾಮೂಹಿಕ ಅತ್ಯಾಚಾರದ ಸುಳ್ಳು ಕಥೆಯನ್ನು ಸಿದ್ಧಪಡಿಸಿ ನಾಟಕವಾಡುತ್ತಿದ್ದಾಳೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ವಿಚಾರಣೆಯ ವೇಳೇಯಲ್ಲಿ ಮಹಿಳೆ ತನ್ನ ಗೆಳೆಯನನ್ನು ಮದುವೆಯಾಗಲು ಹೀಗೆ ಮಾಡಿರುವುದಾಗಿ, ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾಳೆ. ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಇದಕ್ಕೂ ಮೊದಲು, ಚಿಖಾಲಿ ಪ್ರದೇಶದ ಸಮೀಪ ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಮಹಿಳೆ ಪೊಲೀಸರಿಗೆ ದೂರು ಕೊಟ್ಟಿದ್ದಳು.
ಬೆಳಿಗ್ಗೆ ರಾಮದಾಸ್ಪೇಟ್ ಪ್ರದೇಶದಲ್ಲಿ ಸಂಗೀತ ತರಗತಿಗೆ ಹಾಜರಾಗಲು ಹೋಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಬಿಳಿ ಬಣ್ಣದ ವ್ಯಾನ್ನಲ್ಲಿ ಬಂದು ಅಡ್ರೆಸ್ ಕೇಳುವ ನೆಪದಲ್ಲಿ ಬಲವಂತವಾಗಿ ವ್ಯಾನ್ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಆಕೆಯ ದೂರು ನಿಡಿದ್ದಳು.
ಆರು ಗಂಟೆಗೂ ಹೆಚ್ಚು ಕಾಲ ತೀವ್ರ ಪ್ರಯತ್ನಗಳ ನಂತರ ಮತ್ತು 50 ಕ್ಕೂ ಹೆಚ್ಚು ಜನರ ವಿಚಾರಣೆಯ ನಂತರ, ಮಹಿಳೆ ಸಾಮೂಹಿಕ ಅತ್ಯಾಚಾರದ ಕಥೆಯನ್ನು ಹೆಣೆದಿದ್ದಾಳೆ ಎಂದು ಪೊಲೀಸರು ತೀರ್ಮಾನಿಸಿದರು.