ಮಹಿಳೆಯರು ಬಿಜೆಪಿ ಮುಖಂಡರೊಬ್ಬರಿಗೆ ಚಪ್ಪಲಿಯಿಂದ ಮನಬಂದಂತೆ ಥಳಿಸಿರುವ ಘಟನೆ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮುಖಂಡನ ಬಟ್ಟೆ ಹರಿದು ಕತ್ತು ಹಿಸಿಕಿದ್ದಾರೆ ದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಮುಖಂಡನ ಬೆಂಬಲಿಗರು ನೀಡಿದ ದೂರಿನನ್ವಯ 10 ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪೊಲೀಸರು ತನಿಖೆ ನಡೆಸಿದ್ದು, ಸ್ಪೇಷನ್ ರಸ್ತೆಯಲ್ಲಿನ ತುಂಡ್ಲಾ ನಗರ ಕೇಂದ್ರದ ಮುಂಭಾಗದಲ್ಲಿ ಧರ್ಮಶಾಲೆ ವಿಚಾರವಾಗಿ ಗಲಾಟೆ ನಡೆದಿದೆ. ಕೆಲವರು ಧರ್ಮ ಶಾಲೆ ಸ್ವಾಧೀನಪಡಿಸಿಕೊಳ್ಳಲು ಬಯಸುತ್ತಿದ್ದು, ಕೆಲವು ಮಹಿಳೆಯರು ಮತ್ತು ಪುರುಷರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಮಾಹಿತಿ ಪಡೆಯಲು ಬಿಜೆಪಿ ಮುಖಂಡ ಆಗಮಿಸಿದ್ದರು. ಮುಖಂಡನನ್ನು ನೋಡಿದ ಕೂಡಲೇ ಅಲ್ಲಿದ್ದ ಜನರು ಮಹಿಳೆಯರು ಸೇರಿದಂತೆ ಹಲವರು ಆಕ್ರೋಶಗೊಂಡು ಥಳಿಸಿದ್ದಾರೆ ಎದು ಆರೋಪಿಲಾಗಿದೆ. ಸಾರ್ವಜನಿಕ ಸ್ಥಳದಲ್ಲಿಯೇ ಚಪ್ಪಲಿಯಿಂದ ಹಲ್ಲೆ ನಡೆಸುತ್ತಿರುವುದನ್ನು ವೈರಲ್ ವಿಡಿಯೋದಜಲ್ಲಿ ನೋಡಬಹುದು. ಬಟ್ಟೆ ಹರಿದು ಹಾಕುವ ಜೊತಗೆ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.