ರಾಮನಗರ: ನಾಡಬಾಂಬ್ (Land Bomb) ಸ್ಫೋಟಗೊಂಡ ಪರಿಣಾಮ ವ್ಯಕ್ತಿಯ ಕೈ ಛಿದ್ರವಾಗಿರುವ ಘಟನೆ ನಡೆದಿದೆ.
ಈ ಘಟನೆ ಕನಕಪುರ (Kanakapura) ತಾಲೂಕಿನ ನೇರಳಹಳ್ಳಿದೊಡ್ಡಿ ಗ್ರಾಮದಲ್ಲಿ ನಡೆದಿದೆ. ರೈಲ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ಕೋಲಾರ ಮೂಲದ ನೌಷದ್ ಪಾಷ (29) ಗಂಭೀರವಾಗಿ ಗಾಯಗೊಂಡಿದ್ದಾರೆ. ರೈಸ್ ಮಿಲ್ ಹಿಂಭಾಗ ಬಿದ್ದಿದ್ದ ಚೆಂಡಿನ ರೀತಿಯ ವಸ್ತುವನ್ನು ನಾಡಬಾಂಬ್ ಎಂದು ಗೊತ್ತಾಗದೆ ಕೈಯಲ್ಲಿ ಹಿಡಿದಿದ್ದರಿಂದ ಅದು ಸ್ಪೋಟವಾಗಿ ಕೈ ಛಿದ್ರವಾಗಿದೆ. ಸದ್ಯ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆನಂತರ ಪರಿಶೀಲನೆ ನಡೆಸಿದಾಗ ನಾಡ ಬಾಂಬ್ ಗಳು ಪತ್ತೆಯಾಗಿವೆ. ಕಾಡು ಹಂದಿಗಳನ್ನು ಹೊಡೆಯಲು ನಾಡಬಾಂಬ್ ಇಟ್ಟಿದ್ದರು ಎನ್ನಲಾಗಿದೆ.