ಚಿತ್ರದುರ್ಗ: ಬೈಕ್ ಸವಾರನ ಮೇಲೆ ಗೂಳಿಯಿಂದ ದಾಳಿ ನಡೆದಿರುವ ಘಟನೆ ನಗರದಲ್ಲಿ ನಡೆದಿದೆ.
ಗೂಳಿ ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಥಳೀಯ ಜನರು ರಸ್ತೆಯ ಮೇಲೆ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ನಗರದ ಐಯುಡಿಪಿ ಬಡಾವಣೆಯಲ್ಲಿ ಬೈಕ್ ಸವಾರರನನ್ನು ಬೆನ್ನಟ್ಟಿದ ಒಂದು ಗೂಳಿ ಆತನ ಮೇಲೆ ಮನಬಂದಂತೆ ದಾಳಿ ನಡೆಸಿದೆ. ಬೈಕ್ ನಲ್ಲಿದ್ದ ಇಬ್ಬರ ಮೇಲೆಯೂ ದಾಳಿಗೆ ಮುಂದಾಗಿದೆ. ಆಗ ವಾಹನ ಬಿಟ್ಟು ಅವರು ಓಡಿ ಹೋಗಿದ್ದಾರೆ.
ಆಗ ಗೂಳಿ ಅವರ ಹಿಂದೆ ಓಡಿದೆ. ಕಳೆದ ಒಂದು ವಾರದಿಂದ ಗೂಳಿಯ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಗೂಳಿ ಹಿಡಿಯುವ ಕಾರ್ಯ ಮಾತ್ರ ನಡೆಯುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








