ಮುಂಬಯಿ : ರಸ್ತೆಯಲ್ಲಿ ನಿಂತಿದ್ದ ಕಂಟೈನರ್ ಟ್ರಕ್ ಗೆ (Container Truck) ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಮಹಾರಾಷ್ಟ್ರದ (Maharashtra) ನಾಸಿಕ್ (Nashik) ಜಿಲ್ಲೆಯ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ನಡೆದಿದೆ. ಕಾರು ನಾಸಿಕ್ನಿಂದ ಧುಲೆ (Dhule) ಮಾರ್ಗವಾಗಿ ತೆರಳುತ್ತಿದ್ದ ವೇಳೆ ಶಿವಾರ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಕಂಟೈನರ್ ನ್ನು ರಿಪೇರಿಗಾಗಿ ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕಿರಣ್ ಅಹಿರಾರಾವ್ (47), ಕೃಷ್ಣಕಾಂತ್ ಮಾಲಿ (43), ಪ್ರವೀಣ್ ಪವಾರ್ (38) ಮತ್ತು ಅನಿಲ್ ಪಾಟೀಲ್ (38) ಎಂದು ಗುರುತಿಸಲಾಗಿದೆ.