ಅಂತ್ಯಕ್ರಿಯೆಗೆ ಹೋಗಿದ್ದ ಕಾರೊಂದು ನಿಯಂತ್ರಣ ತಪ್ಪಿದ ಪರಿಣಾಮ ಮರಕ್ಕೆ ಡಿಕ್ಕಿ ಹೊಡೆದ ಘಟನೆಯೊಂದು ಹರಿಯಾಣದ ಸಿರ್ಸಾ ಜಿಲ್ಲೆಯ ದಬ್ವಾಲಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಐವರು ಒಂದೇ ಕುಟುಂಬದವರು ಎನ್ನಲಾಗಿದೆ. ಸಾವನ್ನಪ್ಪಿದವರನ್ನು ರಾಜಸ್ಥಾನದ ಶ್ರೀಗಂಗಾನಗರದ ರಾಮದೇವ್ ಕಾಲೋನಿಯ ನಿವಾಸಿ ಬನ್ವಾರಿ ಲಾಲ್ ವರ್ಮಾ, ಅವರ ಪತ್ನಿ ದರ್ಶನಾ, ಅಣ್ಣ ಕೃಷ್ಣಕುಮಾರ್, ಅವರ ಪತ್ನಿ ಗುದ್ದಿದೇವಿ, ಎರಡನೇ ಸಹೋದರ ಓಂಪ್ರಕಾಶ್ ಅವರ ಪತ್ನಿ ಚಂದ್ರಕಲಾ, ಕಾರು ಚಾಲಕ ಎನ್ನಲಾಗಿದೆ.
ಮೃತರಾಗಿರುವ ದರ್ಶನಾದೇವಿ ಅವರ ತಂದೆ ಸಾವನ್ನಪ್ಪಿದ್ದರು. ಹೀಗಾಗಿ ಅಂತ್ಯಕ್ರಿಯೆಗೆ ಅಳಿಯ ಸೇರಿದಂತೆ ಕುಟುಂಬಸ್ಥರು ಹೊರಟಿದ್ದರು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮತ್ತೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.