ಐಪಿಎಲ್ ಪಂದ್ಯದ ಗೇಮ್ ಆಪ್ ಮೂಲಕ ಗೇಮ್ ಆಡಿ ಇತ್ತೀಚೆಗೆ ಹಲವರು ರಾತ್ರೋರಾತ್ರಿ ಶ್ರೀಮಂತಾರಾಗುತ್ತಿದ್ದಾರೆ.
ರಾಜಸ್ಥಾನದ ಭರತ್ ಪುರ ಜಿಲ್ಲೆಯ ರೂಪವಾಸ್ ತೆಹಸಿಲ್ ನ ಮಾದಾಪುರ ಗ್ರಾಮದ ದಿನಗೂಲಿ ನೌಕರರೊಬ್ಬರು ಈಗ ಆನ್ ಲೈನ್ ಗೇಮ್ ನಲ್ಲಿ 2 ಕೋಟಿ ರೂ. ಗೆದ್ದಿದ್ದಾರೆ. ಮಾದಾಪುರ ಗ್ರಾಮದ ನಿವಾಸಿ ಖೇಮ್ ಸಿಂಗ್ ಡ್ರೀಮ್ 11 ಫ್ಯಾಂಟಸಿ ಗೇಮ್ ನಲ್ಲಿ 2 ಕೋಟಿ ರೂ. ಗೆದ್ದಿರುವ ವ್ಯಕ್ತಿ
ಖೇಮ್ ಸಿಂಗ್ ತನಗೆ ಕ್ರಿಕೆಟ್ ಮತ್ತು ಈ ಆಟದ ಬಗ್ಗೆ ಗೊತ್ತಿರಲಿಲ್ಲ. ಬೇರೆಯವರು ಆಡುವುದನ್ನು ನೋಡಿ ನಾನು ಕುತೂಹಲಕ್ಕಾಗಿ ಈ ಆಟವನ್ನು ಆಡಿದೆ. ಕೇವಲ ಎರಡನೇ ಪ್ರಯತ್ನದಲ್ಲಿಯೇ 2 ಕೋಟಿ ರೂ. ಗೆದ್ದಿದ್ದೇನೆ. ಚೆನ್ನೈ ವರ್ಸಸ್ ಹೈದರಾಬಾದ್ ಪಂದ್ಯದ ವೇಳೆ 49 ರೂಪಾಯಿ ಹೂಡಿಕೆ ಮಾಡಿ 2 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದೇನೆ ಎಂದು ಖೇಮ್ ಸಿಂಗ್ ಹೇಳಿದ್ದಾರೆ.
ಖೇಮ್ ಸಿಂಗ್ ಮತ್ತು ಅವರ ಕುಟುಂಬ ತುಂಬಾ ಸಂತೋಷವಾಗಿದೆ. ವಿಜೇತ ಯುವಕನಿಗೆ ಗ್ರಾಮಸ್ಥರು ಮಾಲೆ, ಪೇಟ ತೊಡಿಸಿ ಸನ್ಮಾನ ಮಾಡಿದ್ದಾರೆ. ಕೋಟ್ಯಾಧೀಶನಾಗಿರುವ ಖೇಮ್ ಸಿಂಗ್ ಕುಟುಂಬದ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು. ಹೊಟ್ಟೆ ಪಾಡಿಗಾಗಿ ಹರಿಯಾಣದ ಗುರ್ಗಾಂವ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ತಮ್ಮ ಊರಿನ ಹಲವರು ಡ್ರೀಮ್ 11 ಆಡುವುದನ್ನು ನೋಡುತ್ತಿದ್ದರು.
ಅವರನ್ನು ನೋಡಿದ ನಂತರ ಈ ಆಟವನ್ನು ಆಡಲು ಆರಂಭಿಸಿದೆ. ಮೊದಲ ಸಲ ಸೋತಾಗ ನನ್ನ ಮನಸ್ಸಿಗೆ ನಿರಾಸೆಯಾಯಿತು. ನಾಲ್ಕೈದು ದಿನಗಳ ನಂತರ ಎರಡನೇ ಪ್ರಯತ್ನದಲ್ಲಿ ಚೆನ್ನೈ-ಹೈದರಾಬಾದ್ ನಡುವಿನ ಪಂದ್ಯದ ವೇಳೆ 49 ರೂಪಾಯಿ ಹಾಕಿ ಟೀಮ್ ಮಾಡಿದ್ದೆ. ಅದರಲ್ಲಿ ಎರಡು ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಬ್ಯಾಂಕ್ ಖಾತೆಗೆ 69 ಲಕ್ಷ ರೂ. ಬಂದಿದೆ. ಹಣ ಬಂದ ಮೇಲೆ ಏನೂ ಮಾಡಬೇಕು ಎಂಬುವುದನ್ನು ಯೋಚಿಸಿಲ್ಲ ಎಂದು ಹೇಳಿದ್ದಾರೆ.