Crime: ಜಿಲ್ಲೆಯ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾದ ಜಿಲ್ಲಾ ವೈದ್ಯಾಧಿಕಾರಿ

1 min read
Shivamogga Saaksha Tv

ಜಿಲ್ಲೆಯ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾದ ಜಿಲ್ಲಾ ವೈದ್ಯಾಧಿಕಾರಿ

ಶಿವಮೊಗ್ಗ: ಸಾಗರದ ಗಣಪತಿ ಕೆರೆಯೊಂದರಲ್ಲಿ ಜಿಲ್ಲೆಯ ವೈದ್ಯಾಧಿಕಾರಿಯ ಶವ ಪತ್ತೆಯಾಗಿದೆ.

 ಡಾ. ಶರ್ಮ ಮೃತ ದುರ್ದವಿ.ಇವರ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಶಂಕೆ ವ್ಯಕ್ತವಾಗಿದೆ. ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ. ಮೃತ ಶರ್ಮ ಅವರ ಪತಿ ಸಾಗರ ತಾಲೂಕಿನ ಭೀಮನಕೋಣೆ ಗ್ರಾಮ ಪಂಚಾಯಿತಿ ಪಿಡಿಒ ಆಗಿ ಕರ್ತವ್ಯ ‌ನಿರ್ವಹಿಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ವೈದ್ಯೆ ಡಾ.ಶರ್ಮರವರು ಸಾಗರದಲ್ಲಿ ತಾಲೂಕು ಸಹಾಯಕ ವೈದ್ಯಾಧಿಕಾರಿಯಾಗಿ ಹಾಗೂ ರಾಷ್ಟ್ರೀಯ ಲಸಿಕಾ ಸುರಕ್ಷತಾ ಅಭಿಯಾನದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಬಹಳಷ್ಟು ಧಕ್ಷ ಮತ್ತು ಪ್ರಾಮಾಣಿಕರಾಗಿದ್ದರು.

ಕೋವಿಡ್ ಎರಡು ಮತ್ತು ಮೂರನೇ ಅಲೆಯಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದರು. ಇಂತಹ ಉತ್ತಮ ವೈದ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡರಾ ಅಥವಾ ಕೊಲೆ ಮಾಡಲಾಗಿದೆಯೇ ಎಂಬ ಶಂಕೆ ಸ್ಥಳೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಘಟನೆ ಬಗ್ಗೆ ಮೃತ ಶರ್ಮ ಅವರ ತಂದೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd