ವೈದ್ಯರು ವ್ಯಕ್ತಿಯೊಬ್ಬರ ದೇಹದಿಂದ ಜಿರಳೆ ಹೊರ ತೆಗೆದಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. 55 ವರ್ಷದ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆಯಿಂದಾಗಿ ಅಮೃತಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ವೇಳೆ ಎಕ್ಸ್ ರೇ ತೆಗೆದು ನೋಡಿದ ವೈದ್ಯರಿಗೆ ಶ್ವಾಸಕೋಶದಲ್ಲಿ ಏನೋ ವಸ್ತು ಇರುವುದು ಗೊತ್ತಾಗಿದೆ. ಬ್ರಾಂಕೋಸ್ಕೋಪಿ ಪರೀಕ್ಷೆಯಿಂದ ಶ್ವಾಸಕೋಶದಲ್ಲಿ ಜಿರಳೆ ಇರುವುದು ಗೊತ್ತಾಗಿ 8 ಗಂಟೆಗಳ ಸತತ ಪ್ರಯತ್ನದಿಂದ ಶ್ವಾಸಕೋಶದಲ್ಲಿದ್ದ 4 ಸೆಂಟಿ ಮೀಟರ್ ಉದ್ದದ ಜಿರಳೆಯನ್ನು ಹೊರತೆಗೆದಿದ್ದಾರೆ.
ವೈದ್ಯರ ತಂಡ ರೋಗಿಯ ಶ್ವಾಸಕೋಶದಿಂದ ಜಿರಳೆ ತೆಗೆದುಹಾಕಲು ಎಂಟು ಗಂಟೆಗಳ ಕಾಲ ಹರಸಾಹಸ ಮಾಡಿದ್ದಾರೆ. ಸತ್ತಿದ್ದ ಜಿರಳೆಯ ಸಣ್ಣ ಅಂಶವೂ ದೇಹದಲ್ಲಿ ಉಳಿಯದಂತೆ ತೆಗೆದು ಹಾಕಲಾಗಿದೆ. ಇಲ್ಲವಾದರೆ, ಭವಿಷ್ಯದಲ್ಲಿ ಸೋಂಕಿಗೆ ಕಾರಣವಾಗಬಹುದು ಎಂದು ವೈದ್ಯರು ಹರಸಾಹಸ ಪಟ್ಟು ಈ ಕಾರ್ಯ ಮಾಡಿದ್ದಾರೆ. ಸದ್ಯ ರೋಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.