ಮೈಸೂರು: ಚುನಾವಣೆ ಫಲಿತಾಂಶಕ್ಕೆ (Lok Sabha Election Result) ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಗೆಲುವು- ಸೋಲುಗಳ ಲೆಕ್ಕಾಚಾರ ಶುರುವಾಗಿದ್ದು, ನಿನ್ನೆಯಷ್ಟೇ ಎಕ್ಸಿಟ್ ಪೋಲ್ ಬಿಡುಗಡೆಯಾಗಿದ್ದವು. ಈಗ ಶ್ವಾನವೊಂದು ಫಲಿತಾಂಶದ ಭವಿಷ್ಯ ನುಡಿದಿದೆ.
ಮೈಸೂರಿನ ಶ್ವಾನವೊಂದು (Dog) ಫಲಿತಾಂಶದ ಭವಿಷ್ಯ ನುಡಿದಿದೆ. ಮೈಸೂರಿನ ಕೆ.ಟಿ. ಸ್ಟ್ರೀಟ್ ನ ಕಾಲಭೈರವೇಶ್ವರ ದೇಗುಲದಲ್ಲಿ ಭೈರವ ಎಂಬ 2 ವರ್ಷದ ಶ್ವಾನ ಈ ಬಾರಿ ನರೇಂದ್ರ ಮೋದಿ (Narendra Modi) ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದೆ.
ಗೋಪಿನಾಥ್ ಎಂಬುವವರು ಸಾಕಿರುವ ಭೈರವ ಶ್ವಾನದ ಮುಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಭಾವಚಿತ್ರ ಇಟ್ಟಾಗ ಅದು ಮೋದಿ ಭಾವಚಿತ್ರ ಆಯ್ಕೆ ಮಾಡುವ ಮೂಲಕ ಫಲಿತಾಂಶದ ಭವಿಷ್ಯ ನುಡಿದಿದೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿರುವ ಎಂ.ಲಕ್ಷ್ಮಣ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾವಚಿತ್ರ ಇಟ್ಟಾಗ ಯದುವೀರ್ ಭಾವಚಿತ್ರ ಆಯ್ಕೆ ಮಾಡಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ಬೆಂಬಲಿಗರು, ನಾಯಕರು, ಕಾರ್ಯಕರ್ತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಎಕ್ಸಿಟ್ ಪೋಲ್ ಹೊರ ಬಿದ್ದಿದ್ದು, ಎನ್ ಡಿಎ 350ರಷ್ಟು ಸರಿ ಸುಮಾರು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ ನುಡಿದಿವೆ.